ಭಾರತದಲ್ಲಿ ಬಾಂಗ್ಲಾ ಸಂಸದನ ಹತ್ಯೆ! ಇನ್ನೂ ಪತ್ತೆಯಾಗದ ಮೃತದೇಹ!

masthmagaa.com:

ಮೆಡಿಕಲ್‌ ಟ್ರೀಟ್‌ಮೆಂಟ್‌ ಅಂತೇಳಿ ಕಲ್ಕತ್ತಾಗೆ ಬಂದಿದ್ದ ಬಾಂಗ್ಲಾ ಸಂಸದ ಅನ್ವರುಲ್‌ ಅಜಿಮ್‌ ಸಂಸದರೀಗ ಹತ್ಯೆಯಾಗಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಆದ್ರೆ ಅನ್ವರುಲ್‌ ಅಜಿಮ್‌ ಅವ್ರ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆದ್ರೆ ಸಂಸದರಿದ್ದ ಫ್ಲಾಟ್‌ಗೆ ತೆರಳಿದ್ದ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ಮತ್ತು ಕೇಂದ್ರ ತನಿಖಾ ದಳ ಶೋಧ ಕಾರ್ಯಚರಣೆ ನಡೆಸಿದ್ದಾರೆ. ಈ ವೇಳೆ ರಕ್ತದ ಕಲೆಗಳು ಪತ್ತೆಯಾಗಿದೆಯೇ ಹೊರತು ಮೃತದೇಹ ಮಾತ್ರ ಇರಲಿಲ್ಲ ಅಂತ ಹೇಳಿದ್ದಾರೆ. ಇನ್ನು ಫ್ಲಾಟ್‌ನ ಸಿಸಿಟಿವಿ ಫುಟೇಜ್‌ ಚೆಕ್‌ ಮಾಡಿದಾಗ, ಮೇ 13ರಂದು ಅನ್ವರುಲ್‌ ಅಜಿಮ್‌ ಅವ್ರು ಇಬ್ಬರು ಪುರುಷರು ಮತ್ತೊಬ್ಬಳು ಮಹಿಳೆಯೊಂದಿಗೆ ಫ್ಲಾಟ್‌ಗೆ ಎಂಟ್ರಿ ಕೊಟ್ಟಿದ್ರು. ನಂತ್ರ ಈ ಇಬ್ಬರು ಪುರಷರು ಮತ್ತು ಮಹಿಳೆ ಮೇ 13ರಂದು ಮತ್ತು 15ರಂದು ಫ್ಲಾಟ್‌ನಿಂದ ಹೊರಗೆ ಬರೋದು ಸಿಸಿಟಿವಿನಲ್ಲಿ ಸೆರಯಾಗಿದೆ. ಹೊರಬರೋವಾಗ ಇಬ್ಬರು ದೊಡ್ಡ ಗಾತ್ರದ ಬ್ಯಾಗ್‌ಗಳನ್ನ ಕೂಡ ಹಿಡಿದಿದ್ರು. ಆದ್ರೆ ಸಂಸದ ಅನ್ವರುಲ್ ಮಾತ್ರ ಹೊರ ಬರೋದು ಸಿಸಿಟಿವಿಯಲ್ಲಿ ಕ್ಯಾಪ್ಚರ್‌ ಆಗಿಲ್ಲ. ಇನ್ನು ಈ ಹತ್ಯೆ ಪ್ರಕರಣ ಸಂಬಂಧ ಮೂವರು ಶಂಕಿತರನ್ನ ಬಾಂಗ್ಲಾದೇಶದಲ್ಲಿ ಅರೆಸ್ಟ್‌ ಮಾಡಲಾಗಿದ್ದು, ಇದೊಂದು ಯೋಜಿತ ಹತ್ಯೆ ಅಂತ ಬಾಂಗ್ಲಾದೇಶದ ಗೃಹ ಸಚಿವ ಅಸದುಜ್ಜಮಾನ್‌ ಖಾನ್‌ ಹೇಳಿದ್ದಾರೆ. ಇನ್ನು ಈ ಹತ್ಯೆ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಆಘಾತವನ್ನ ವ್ಯಕ್ತಪಡಿಸಿದ್ದು, ಅನ್ವರುಲ್‌ ಅಜಿಮ್‌ ಅವ್ರ ಫ್ಯಾಮಿಲಿಗೆ ಸಂತಾಪ ಸೂಚಿಸಿದ್ದಾರೆ. ಸದ್ಯ ಭಾರತ ಮತ್ತು ಬಾಂಗ್ಲಾದೇಶದ ಪೊಲೀಸರು ಒಟ್ಟು ಸೇರಿ ತನಿಖೆ ನಡೆಸ್ತಿದ್ದಾರೆ…. ಸಂಸದರ ಮೃತದೇಹಕ್ಕೆ ಹುಡುಕಾಟ ಕೂಡ ನಡೆಸ್ತಿದ್ದಾರೆ. ಜೊತೆಗೆ ಈ ಹತ್ಯೆ ಹಿಂದಿರೋ ಉದ್ದೇಶವನ್ನ ಕಲೆಹಾಕೋಕೆ ಪ್ರಯತ್ನಸ್ತಿದ್ದಾರೆ.

-masthmagaa.com

Contact Us for Advertisement

Leave a Reply