ತನ್ನ ITC ಷೇರುಗಳನ್ನ ಮಾರೋಕೆ ಮುಂದಾದ ದೊಡ್ಡ ಶೇರುದಾರ BAT!

masthmagaa.com:

ಸಿಗರೆಟ್‌ನಿಂದ ಹೋಟೆಲ್‌ಗಳವರೆಗೂ ವ್ಯಾಪಾರ ವಿಸ್ಥರಿಸಿರೋ ITC ಲಿಮಿಟೆಡ್‌ನ ಅತಿದೊಡ್ಡ ಷೇರುದಾರ ಕಂಪನಿ BAT ತನ್ನ ಕೆಲವು ಷೇರುಗಳನ್ನ ಮಾರೋಕೆ ಮುಂದಾಗಿದೆ. BAT ಅಥ್ವಾ ಬ್ರಿಟಿಷ್‌ ಅಮೆರಿಕನ್‌ ಟೊಬ್ಯಾಕೋ, ITCಯ 29.03% ಪಾಲುದಾರಿಕೆ ಹೊಂದಿದೆ. ಇದರ ವ್ಯಾಲ್ಯೂ ಸುಮಾರು ₹1.5 ಲಕ್ಷ ಕೋಟಿ. ಇದೀಗ ಇದ್ರಲ್ಲಿ ಷೇರುಗಳನ್ನ ಮಾನಿಟೈಸ್‌ ಮಾಡೋಕೆ ಅಥ್ವಾ ಮಾರೋಕೆ BAT ಮುಂದಾಗಿದೆ. ಅದಕ್ಕಾಗಿ ಕೆಲವು ರೆಗುಲೇಟರಿ ಪ್ರೊಸೆಸ್‌ಗಳನ್ನ ಕಂಪ್ಲೀಟ್‌ ಮಾಡೋ ಹಂತದಲ್ಲಿದೀವಿ ಅಂತ BAT ಹೇಳಿದೆ.

-masthmagaa.com

Contact Us for Advertisement

Leave a Reply