ಏಷ್ಯಾ ಇಲೆವೆನ್ ತಂಡ ಪ್ರಕಟ.. ಕನ್ನಡಿಗ ಕೆ.ಎಲ್​. ರಾಹುಲ್​ಗೆ ಸ್ಥಾನ

ಬಾಂಗ್ಲಾದೇಶದ ಪಿತಾಮಹ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಜನ್ಮಶತಮಾನೋತ್ಸವ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ) ಏಷ್ಯಾ ಇಲೆವೆನ್‌ ಹಾಗೂ ವಿಶ್ವ ಇಲೆವೆನ್‌ ನಡುವೆ 2 ಟಿ-20  ಪಂದ್ಯಗಳನ್ನ ಆಯೋಜಿಸಲು ಭರ್ಜರಿ ತಯಾರಿ ನಡೆಸಿದೆ. ಅದಕ್ಕಾಗಿ ಏಷ್ಯಾ ಇಲೆವೆನ್ ತಂಡವನ್ನ ಕೂಡ ಅನೌನ್ಸ್ ಮಾಡಿದ್ದು ಟೀಂ ಇಂಡಿಯಾದ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಬಾಂಗ್ಲಾದೇಶದ ನಾಲ್ವರು, ಶ್ರೀಲಂಕಾದ ಇಬ್ಬರು, ಅಫ್ಘನಿಸ್ತಾನದ ಇಬ್ಬರು ಹಾಗೂ ನೇಪಾಳದ ಓರ್ವ ಆಟಗಾರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾದಿಂದ ವಿರಾಟ್‌ ಕೊಹ್ಲಿ, ಶಿಖರ್‌ ಧವನ್, ಕನ್ನಡಿಗ ಕೆ.ಎಲ್. ರಾಹುಲ್, ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ರಿಷಬ್ ಪಂತ್, ಕುಲ್ದೀಪ್‌ ಯಾದವ್‌ ಹಾಗೂ ಮೊಹಮ್ಮದ್‌ ಶಮಿ ಏಷ್ಯಾ ಇಲೆವೆನ್‌ ಸಮವಸ್ತ್ರ ತೊಡಲಿದ್ದಾರೆ.  ಮಾರ್ಚ್‌ 18 ಮತ್ತು 21ರಂದು ಢಾಕಾದ ಶೇರ್‌-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯಲಿವೆ. ಆದ್ರೆ ಏಷ್ಯಾ ಇಲೆವೆನ್ ತಂಡದ ಮೊದಲ ಪಂದ್ಯ ಮತ್ತು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯಗಳು ಕ್ಲ್ಯಾಶ್​ ಆಗುವ ಕಾರಣ ಟೀಂ ಇಂಡಿಯಾದ 6 ಆಟಗಾರರು ಲಭ್ಯರಾಗುವುದು ಅನುಮಾನ ಎನ್ನಲಾಗ್ತಿದೆ. ಆದರೆ ಮಾರ್ಚ್‌ 21ರಂದು ನಡೆಯಲಿರುವ ಎರಡನೇ ಪಂದ್ಯಕ್ಕೆ ಆರೂ ಆಟಗಾರರು ಲಭ್ಯವಾಗಲಿದ್ದಾರೆ.

ಏಷ್ಯಾ ಇಲೆವೆನ್‌:
ವಿರಾಟ್‌ ಕೊಹ್ಲಿ, ಶಿಖರ್‌ ಧವನ್, ಕೆ.ಎಲ್​. ರಾಹುಲ್, ರಿಷಭ್‌ ಪಂತ್‌, ಮೊಹಮ್ಮದ್‌ ಶಮಿ, ಕುಲ್ದೀಪ್ ಯಾದವ್, ಲಿಟನ್‌ ದಾಸ್‌, ಮುಷ್ಫಿಕರ್‌ ರಹೀಮ್, ತಮಿಮ್‌ ಇಕ್ಬಾಲ್, ತಿಸಾರ ಪೆರೆರಾ, ರಶೀದ್‌ ಖಾನ್‌, ಮುಸ್ತಫಿಝುರ್ ರೆಹಮಾನ್, ಸಂದೀಪ್‌ ಲಾಮಿಚ್ಚಾನೆ, ಲಸಿತ್‌ ಮಾಲಿಂಗ ಮತ್ತು ಮುಜೀಬ್‌ ಉರ್‌ ರೆಹಮಾನ್.

Contact Us for Advertisement

Leave a Reply