IPL ಮತ್ತಷ್ಟು ಕಲರ್​​ಫುಲ್​.. 2022ಕ್ಕೆ ಇನ್ನೆರಡು ತಂಡಗಳ ಸೇರ್ಪಡೆ!

masthmagaa.com:

ಕಲರ್​ಫುಲ್ ಟೂರ್ನಿ ಐಪಿಎಲ್ 2022ರಿಂದ ಮತ್ತಷ್ಟು ಕಲರ್​ಫುಲ್ ಆಗಲಿದೆ. 2022ರಿಂದ ಐಪಿಎಲ್​ನಲ್ಲಿ ಮತ್ತೆರಡು ತಂಡಗಳಿಗೆ ಅವಕಾಶ ಕೊಟ್ಟು ಒಟ್ಟು 10 ತಂಡಗಳನ್ನ ಆಡಿಸಲು ಬಿಸಿಸಿಐ ಅನುಮತಿ ನೀಡಿದೆ. ಇವತ್ತು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ 2028ರಲ್ಲಿ ಲಾಸ್​ ಏಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ಕ್ರಿಕೆಟ್ ಆಟವನ್ನ ಕೂಡ ಸೇರಿಸಬೇಕು ಎಂಬ ಐಸಿಸಿ ಮನವಿಗೆ ಬಿಸಿಸಿಐ ಕೂಡ ಬೆಂಬಲ ಸೂಚಿಸಿದೆ. ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್​ನಿಂದ (IOA) ಸ್ಪಷ್ಟನೆ ಸಿಕ್ಕ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಐಸಿಸಿ ಟಿ-20 ವಿಶ್ವಕಪ್ ಮತ್ತು ಒಂಡೇ ವಿಶ್ವಕಪ್​ ಆಯೋಜನೆಗೆ ಸರ್ಕಾರದಿಂದ ತೆರಿಗೆ ವಿನಾಯ್ತಿ ನೀಡುವಂತೆ ಬಿಸಿಸಿಐ ಮನವಿ ಮಾಡಲಿದೆ. ಈ ಸಂಬಂಧ ಬಿಸಿಸಿಐನ ಕಾರ್ಯದರ್ಶಿ ಜೈ ಶಾ ಮತ್ತು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್​ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು ರಾಜೀವ್ ಶುಕ್ಲಾ ಅವರನ್ನ ಬಿಸಿಸಿಐ ಉಪಾಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply