ಹೊಸ ಟೀಂ ಫೋಟೋ ಹಾಕಿದ ಗಂಗೂಲಿ..! ಇವರೇ ಈಗ ಬಿಸಿಸಿಐ ಸಾರಥಿಗಳು…

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐನ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಅವರು ಸೋಮವಾರ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಒಬ್ಬರೇ ನಾಮಪತ್ರ ಸಲ್ಲಿಸಿರೋದ್ರಿಂದ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗೋದು ಬಹುತೇಕ ಪಕ್ಕಾ ಆಗಿದೆ. ನಾಮಪತ್ರ ಸಲ್ಲಿಸಿದ ಬಳಿಕ ಮಧ್ಯರಾತ್ರಿ ಒಂದು ಟ್ವೀಟ್ ಮಾಡಿರುವ ಗಂಗೂಲಿ, ಬಿಸಿಸಿಐನ ಹೊಸ ತಂಡದ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೆ ಇದು ಬಿಸಿಸಿಐನ ಹೊಸ ಟೀಂ. ನಾವೆಲ್ಲರೂ ಒಟ್ಟಾಗಿ ಸೇರಿ ಚೆನ್ನಾಗಿ ಕೆಲಸ ಮಾಡುತ್ತೇವೆ ಅನ್ನೋ ನಂಬಿಕೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಅನುರಾಗ್ ಠಾಕೂರ್​​ಗೂ ಧನ್ಯವಾದ ಅರ್ಪಿಸಿದ್ದಾರೆ.

ಸದ್ಯ ಹಿಮಾಚಲ ಪ್ರದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಬಿಸಿಸಿಐ ಖಜಾಂಚಿ  ಮತ್ತು ಅಮಿತ್ ಶಾ ಪುತ್ರ ಜಯ್ ಶಾ ಬೋರ್ಡ್​​ನ ಸದಸ್ಯನಾಗೋದು ಬಹುತೇಕ ಪಕ್ಕಾ ಆಗಿದೆ.

Contact Us for Advertisement

Leave a Reply