ʻಯಾರ್​ ಜೊತೆನಾದ್ರೂ ಸಂಬಂಧ ಇಟ್ಕೊಳ್ಳಿʼ, ನಾಗ ಚೈತನ್ಯ ಡೇಟಿಂಗ್ ಬಗ್ಗೆ ಮೌನ ಮುರಿದ ಸಮಂತಾ!

masthmagaa.com:

ಇತ್ತೀಚೆಗೆ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಡೇಟಿಂಗ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಲಂಡನ್‌ನಲ್ಲಿ ಅಭಿಮಾನಿಯೊಬ್ಬನ ಜೊತೆ ನಾಗಚೈತನ್ಯ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋದಲ್ಲಿ ಹಿಂದೆ ಶೋಭಿತಾ ಕೂಡ ಕುಳಿತಿದ್ದರು. ಲಂಡನ್ ಐಷಾರಾಮಿ ಹೋಟೆಲ್ ಒಂದರಲ್ಲಿ ಭಾರತ ಮೂಲದ ಸುಂದರ್ ಮೋಹನ್ ಕೆಲಸ ಮಾಡುತ್ತಿದ್ದಾರೆ. ಇದೇ ಹೋಟೆಲ್‌ಗೆ ನಾಗ ಚೈತನ್ಯ ಹಾಗೂ ಶೋಭಿತಾ ಹೋಗಿದ್ದರು. ಆ ವೇಳೆ ನಾಗ ಚೈತನ್ಯ ಜೊತೆ ಸುಂದರ್‌ ಪೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೊದಲ್ಲಿ ಶೋಭಿತಾ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಡೇಟಿಂಗ್ ವಿಚಾರವನ್ನು ತಳ್ಳುತ್ತಾ ಬಂದಿದ್ದ ನಾಗ ಚೈತನ್ಯ ಅವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದರು. ಈಗ ಈ ಬಗ್ಗೆ ಸಮಂತಾ ಮೌನ ಮುರಿದಿದ್ದಾರೆ. ದಿ ಸಿಯಾಸತ್ ಡೈಲಿ ವರದಿ ಮಾಡಿರುವಂತೆ ಸಮಂತಾ “ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರನ್ನು ಭೇಟಿಯಾಗಿದ್ದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು ಅವರು ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು” ಎಂದು ಪ್ರತಿಕ್ರಿಯಿಸಿದ್ದಾರೆ.

-masthmagaa.com

Contact Us for Advertisement

Leave a Reply