ಕಾಶ್ಮೀರವನ್ನ ಮರೆತು ಭಾರತದ ಜತೆಗೆ ಸ್ನೇಹ ಬೆಳೆಸಿ: ಪಾಕ್‌ಗೆ ಸೌದಿ ಯುಎಇ ತಾಕೀತು!

masthmagaa.com:

ಯಾವಾಗಲೂ ಕಾಶ್ಮೀರ ಕಾಶ್ಮೀರ ಅಂತ ಜಪ ಮಾಡಬೇಡಿ.. ಕಾಶ್ಮೀರವನ್ನ ಮರೆತು ಬಿಟ್ಟು ಭಾರತದ ಜೊತೆಗೆ ಉತ್ತಮ ಸಂಬಂಧವನ್ನ ನಿರ್ಮಾಣ ಮಾಡ್ಕೊಳ್ಳೊದನ್ನ ಕಲಿತುಕೊಳ್ಳಿ ಅಂತ ಪಾಕಿಸ್ತಾನಕ್ಕೆ ತಾಕೀತು ಮಾಡಲಾಗಿದೆ. ಈ ರೀತಿ ಬುದ್ದಿವಾದ ಹೇಳಿರೋದು ಬೇರೆಯಾರೂ ಅಲ್ಲ..ಪಾಕ್‌ನ ಅಣ್ಣನಂತಿರೋ ಸೌದಿ ಅರೇಬಿಯಾ ಹಾಗೂ ಚಿಕ್ಕಣ್ಣನಂತಿರೋ ಯುಎಇ ದೇಶಗಳು. ಒಐಸಿ ಅಂದ್ರೆ ಆರ್ಗನೈಜೇಷನ್‌ ಆಫ್‌ ಇಸ್ಲಾಮಿಕ್‌ ಕೋ ಆಪರೇಶನ್‌ ಸಭೆಗಳಲ್ಲಿ ಹಾಗೇ ಇನ್ನಿತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಕಾಶ್ಮೀರ ಅಂತ ಅಳುತ್ತಾ ಇರಬೇಡಿ. ಕಾಶ್ಮೀರವನ್ನ ಮರೆತು ಭಾರತದ ಜೊತೆಗೆ ಫ್ರೆಂಡ್ಶಿಪ್‌ ಬೆಳೆಸಿಕೊಳ್ಳಿ. ಭಾರತ 370 ಆರ್ಟಿಕಲ್‌ನ್ನ ರದ್ದು ಮಾಡ್ತು ಅಂತ ನೀವು ಸಿಕ್ಕಸಿಕ್ಕಲೆಲ್ಲಾ ಹೇಳೋಕೆ ಹೋಗಬೇಡಿ ಅಂತ ಪಾಕಿಸ್ತಾನಕ್ಕೆ ಈ ಇಬ್ರೂ ಗೆಳೆಯರು ಹೇಳಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್‌ ಷರೀಫ್‌ ಸೌದಿ ಹಾಗೂ ಯುಇಎಗೆ ಹೋಗಿದ್ದಾಗ ಅಲ್ಲಿ ಅವರಿಗೆ ಈ ರೀತಿ ಹೇಳಿ ಕಳುಹಿಸಲಾಗಿದೆ. ಅದಾದ್ಮೇಲೆನೇ ಪಾಕ್‌ ಪ್ರಧಾನಿ ನಾವು ಭಾರತದ ಜೊತೆಗೆ ಒಳ್ಳೇ ಸಂಬಂಧವನ್ನ ಹೊಂದೋಕೆ ಬಯಸ್ತೀವಿ..ಅದಕ್ಕೆ ಅವಕಾಶ ಬೇಕು ಅಂತ ಮೋದಿಗೆ ಆಗ್ರಹ ಮಾಡಿದ್ರು ಅಂತ ಹೇಳಲಾಗ್ತಿದೆ. ಅಂದ್ರೆ, ಇತ್ತೀಚೆಗೆ ತಾನೇ ಇಂಟ್ರವ್ಯೂ ಒಂದ್ರಲ್ಲಿ ಮಾತನಾಡ್ತಾ ನಮಗೆ ಮೋದಿಯವರು ಹಾಗೂ ಭಾರತ ಸರ್ಕಾರ ಮಾತುಕತೆ ಮಾಡೋಕೆ ಅವಕಾಶ ಕೊಡಬೇಕು…ಕಾಶ್ಮೀರ ವಿಚಾರವನ್ನೂ ಸಹ ನಾವು ಪ್ರಸ್ತಾಪ ಮಾಡೋಕೆ ರೆಡಿ ಇದ್ದೀವಿ…ನಮಗೂ ಶಾಂತಿ ಬೇಕು ಅಂತ ಶೆಹಬಾಜ್‌ ಷರೀಫ್ ಹೇಳಿದ್ರು.‌ ಪಾಕಿಸ್ತಾನದ ಪ್ರಧಾನಿಯವರ ಬಾಯಿಂದ ಬಂದ ಈ ಹೇಳಿಕೆ ಭಾರತ ಹಾಗೂ ಪಾಕಿಸ್ತಾನದಲ್ಲಿ ದೊಡ್ಡ ಸಂಚಲನಕ್ಕೆಕಾರಣವಾಗಿತ್ತು. ಆದ್ರೆ ಈ ಇದ್ರ ಹಿಂದೆ ಗಲ್ಪ್‌ ದೇಶಗಳು ಇವೆ.ಅವರಿಬ್ರು ಉಗಿದು ಕಳಿಸಿದ್ದಕ್ಕೆ ಪಾಕ್‌ ಈ ರೀತಿ ಶಾಂತಿ ಮಂತ್ರ ಹೇಳಿದೆ ಅನ್ನೋದು ಈಗ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply