ಈ ದೇಶದ ವಿಪಕ್ಷ ನಾಯಕಿಗೆ 11 ವರ್ಷ ಜೈಲು ಶಿಕ್ಷೆ! ಯಾಕೆ ಗೊತ್ತಾ?

masthmagaa.com:

ಯೂರೋಪಿಯನ್ ದೇಶವಾದ ಬೆಲಾರುಸ್​​ನಲ್ಲಿ ವಿಪಕ್ಷ ನಾಯಕಿ ಮರಿಯಾ ಕೊಲೆಸ್ನಿಕೋವಾಗೆ 11 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈಕೆ ಕಳೆದ ವರ್ಷ ಬೆಲಾರುಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ರು. ಹೀಗಾಗಿ ಇವರ ವಿರುದ್ಧ ಕೇಸ್ ದಾಖಲಾಗಿತ್ತು. ಕೋರ್ಟ್ ಇವತ್ತು ಶಿಕ್ಷೆ ನೀಡಿದೆ. ಈ ವೇಳೆ ಮರಿಯಾ ಸ್ಮೈಲ್ ಮಾಡ್ತಾ, ಕೈಯಲ್ಲೇ ಹಾರ್ಟ್​ ಸಿಂಬಲ್ ತೋರಿಸಿದ್ದಾರೆ. ಬರೀ ಇವರು ಮಾತ್ರ ಅಲ್ಲ. ಇವರ ಜೊತೆಗೆ ಮತ್ತೋರ್ವ ವಿಪಕ್ಷ ನಾಯಕ ಮ್ಯಾಕ್ಸಿನ್ ಜ್ನಾಕ್​​​ಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದಹಾಗೆ ಬೆಲಾರುಸ್​ನಲ್ಲಿ 1994ರಿಂದ ಅಲೆಕ್ಸಾಂಡಲ್ ಲುಕಾಶೆಂಕೋ ಆಡಳಿತ ಇದೆ. ಕಳೆದ ಚುನಾವಣೆ ವಿವಾದಾತ್ಮಕವಾಗಿದ್ದು, ಇದ್ರಲ್ಲಿ ಅಲೆಕ್ಸಾಂಡರ್ ಗೆಲುವು ಘೋಷಿಸಿಕೊಂಡಿದ್ದಾರೆ. ಆದ್ರೆ ಅವರ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅಂಥವರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸ್ತಿದ್ದಾರೆ ಲುಕಾಶೆಂಕೋ.

-masthmagaa.com

Contact Us for Advertisement

Leave a Reply