ಬಿಜೆಪಿ ಕಾರ್ಯಕರ್ತರಿಗೆ ಟಿಎಂಸಿ ಶಾಸಕ ಬೆದರಿಕೆ!

masthmagaa.com:

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕನೊಬ್ಬ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆಯೊಡ್ಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಸಾನ್​ಸೋಲ್ ಲೋಕಸಭೆ ಕ್ಷೇತ್ರದಲ್ಲಿ ಬರೋ ಪಂಡಬೇಸ್ವರ್ ವಿಧಾನಸಭೆ ಕ್ಷೇತ್ರದ ಶಾಸಕ ನರೇನ್ ಚಕ್ರಬೊರ್ತಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದ್ರಲ್ಲಿ ಬಿಜೆಪಿಯ ಕಟ್ಟರ್​​​​​ ಬೆಂಬಲಿಗರಿಗೆ ಹೇಳಿಬಿಡಿ.. ಅವರು ಮತ ಹಾಕೋಕೆ ಹೋದ್ರೆ ಬಿಜೆಪಿ ಹಾಕಿದ್ದಾರೆ ಅಂತ ಭಾವಿಸ್ತೀವಿ.. ಆಮೇಲೆ ಅವರು ಹೇಗೆ ಇರ್ತಾರೆ ಅನ್ನೋದನ್ನ ಕೂಡ ಯೋಚಿಸಲಿ.. ಅದೇ ಮತ ಹಾಕಲು ಹೋಗದಿದ್ರೆ ಅವರು ನಮಗೆ ಸಪೋರ್ಟ್ ಮಾಡಿದ್ದಾರೆ ಅಂತ ಭಾವಿಸ್ತೀವಿ. ಆರಾಮಾಗಿ ಇರಲು ಬಿಡ್ತೀವಿ. ನಾವು ನಿಮ್ಮ ಜೊತೆಗಿರ್ತೀವಿ ಅಂತ ಹೇಳಿದ್ದಾರೆ. ಅಂದಹಾಗೆ ಅಸಾನ್​​ಸೋಲ್ ಲೋಕಸಭೆ ಕ್ಷೇತ್ರಕ್ಕೆ ಏಪ್ರಿಲ್ 12ರಂದು ಉಪಚುನಾವಣೆ ನಡೆಯಲಿದೆ. ಈ ವಿಡಿಯೋವನ್ನು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply