masthmagaa.com:

ಇನ್ನು ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ಅಥವಾ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿರೋ ಯುವತಿಯ ಸಹೋದರನಿಗೆ ಬೆಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಯುವತಿಯ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ್ದು, ಮಾರ್ಚ್​ 29ನೇ ತಾರೀಖು ಮಡಿವಾಳದಲ್ಲಿರೋ ಇಂಟ್ರಾಗೇಷನ್ ಸೆಂಟರ್​ಗೆ ವಿಚಾರಣೆಗೆ ಬರುವಂತೆ ಯುವತಿಯ ಸಹೋದರನಿಗೆ ಸೂಚಿಸಲಾಗಿದೆ. ಇದು ಬೆಂಗಳೂರಿನ R.T. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ಕೇಸ್ ಸಂಬಂಧ ಅಂತಾನೂ ಹೇಳಿದೆ ಸಿಸಿಬಿ. ಅಂದ್ಹಾಗೆ ಮಗಳು ಕಿಡ್ನಾಪ್ ಆಗಿದ್ದಾಳೆ ಅಂತ ಆಕೆಯ ಪೋಷಕರು ಬೆಳಗಾವಿಯಲ್ಲಿ ದೂರು ದಾಖಲಿಸಿದ್ರು. ಬಳಿಕ ಆ ಕೇಸ್​ R.T. ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿತ್ತು. ಬಹುಶಃ ಇದೇ ಪ್ರಕರಣದಲ್ಲಿ ಯುವತಿಯ ಸಹೋದರನನನ್ನ ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ ಅನಿಸುತ್ತೆ.

-masthmagaa.com

Contact Us for Advertisement

Leave a Reply