ಕಾಂಗ್ರೆಸ್ ವಿರುದ್ದ ಬೆಂಗಳೂರು ಚಲೋ: ಆದ್ರೆ ʻಕೈʼನಿಂದ‌ ದಿಲ್ಲಿ ಚಲೋ!

masthmagaa.com:

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ರೈತರು ʻಬೆಂಗಳೂರು ಚಲೋʼ ರ‍್ಯಾಲಿ ಆಯೋಜಿಸಿ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಬೇಡಿಕೆಗಳನ್ನ ಈಡೇರಿಕೆಗೆ ರೈತರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ಮಂಗಳವಾರ ರೈತರು ಫ್ರೀಡಂ ಪಾರ್ಕ್‌ನ ಪ್ರತಿಭಟನೆಯಲ್ಲಿ ಕೃಷಿಕರನ್ನು ಮದುವೆಯಾಗೋ ಮಹಿಳೆಯರಿಗೆ ಮೀಸಲಾತಿ, ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೃಷಿ ಭೂಮಿ ಸ್ವಾಧೀನ ನಿಲ್ಲಿಸ್ಬೇಕು ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು. ಅಲ್ದೇ ಭೂಮಿಯನ್ನು ಬಿಟ್ಟುಕೊಡೋ ರೈತರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳೋದು ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ತಲಾ 25,000 ರೂ. ಬರ ಪರಿಹಾರ ನೀಡ್ಬೇಕು ಅಂತ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ರು. ಈ ವೇಳೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ರೈತರು ಸ್ಟ್ರೈಕ್‌ನಲ್ಲಿ ಪಾಲ್ಗೊಂಡಿದ್ರು. ಇದ್ರ ಮಧ್ಯೆ ರಾಜ್ಯ ಸರ್ಕಾರ ಮಾತ್ರ ಕೇಂದ್ರದತ್ತ ಬೊಟ್ಟು ಮಾಡ್ತಿದೆ. ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗ್ತಿದೆ ಅಂತ ಬುಧವಾರ ದೆಹಲಿಯಲ್ಲಿ ಪ್ರತಿಭಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಇದು ಬಿಜೆಪಿ ವಿರುದ್ದದ ಸ್ಟ್ರೈಕ್‌ ಅಲ್ಲ. ಬದಲಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಆಗೋ ಅನ್ಯಾಯ ಖಂಡಿಸಿ ನಡೆಯೋ ಪ್ರತಿಭಟನೆ ಅಂದಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ HD ದೇವೆಗೌಡ, JDS ಸೇರಿದಂತೆ ಬಿಜೆಪಿ ನಾಯಕರಿಗೆ ಪ್ರತಿಭಟನೆಯಲ್ಲಿ ಭಾಗಿಯಾಗುವ೦ತೆ ಬುಲಾವ್‌ ನೀಡಿದ್ದೇನೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply