ಬೆಂಗಳೂರು ನಿವಾಸಿಗಳೇ…ಹೊಸ ವರ್ಷದ ಗೈಡ್‌ಲೈನ್ಸ್‌ ಇಲ್ಲಿದೆ!

masthmagaa.com:

ಇನ್ನೇನು ಹೊಸ ವರ್ಷಕ್ಕೆ ಕೇವಲ 5 ದಿನಗಳು ಬಾಕಿ ಇದ್ದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಭಾರೀ ಸಿದ್ಧತೆಗಳಾಗ್ತಿವೆ. ಆದ್ರೆ ಈ ನ್ಯು ಇಯರ್‌ ವೇಳೆ ಏನಾದ್ರೊಂದು ಅಹಿತಕರ ಘಟನೆ ನಡೆಯೋ ಚ್ಯಾನ್ಸಸ್‌ ಜಾಸ್ತಿ ಇರುತ್ತೆ. ಆದ್ರಿಂದ ಕಾನೂನು ಸುವ್ಯವಸ್ಥೆಯನ್ನ ಕಾಪಾಡೋಕೆ ಇದೀಗ ಬೆಂಗಳೂರು ಪೊಲೀಸ್‌ ಫುಲ್‌ ಅಲರ್ಟ್‌ ಆಗಿ, ತಯಾರಿ ಮಾಡ್ತಿದ್ದಾರೆ. ನ್ಯು ಇಯರ್‌ ಸೆಲೆಬ್ರೇಷನ್‌ ವೇಳೆ ಜನರ ಸೇಫ್ಟಿಗಾಗಿ, ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಸೇಫ್ಟಿಗಾಗಿ ನಗರ ಪೊಲೀಸ್‌ ಸೂಕ್ತ ವ್ಯವಸ್ಥೆಗಳನ್ನ ಮಾಡ್ಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಗೈಡ್‌ಲೈನ್ಸ್‌ ನೀಡಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಮಾಹಿತಿ ನೀಡಿದ್ದಾರೆ. ಇದ್ರ ಪ್ರಕಾರ, ಹೊಸ ವರ್ಷಾಚರಣೆ ದಿನ ಕ್ಲಬ್‌ಗಳನ್ನ ಓಪನ್‌ ಇಡೋಕೆ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗುತ್ತೆ. ವೈನ್‌ ಶಾಪ್‌ಗಳಿಗೆ ರಾತ್ರಿ 12 ಗಂಟೆಯವರೆಗೆ ಅವಕಾಶವಿದೆ. ಇನ್ನು ಫ್ಲೈ ಓವರ್‌ ಮೇಲೆ ಸ್ಪೀಡಾಗಿ ವಾಹನ ಓಡ್ಸೋದು ಮತ್ತು ವ್ಹೀಲಿಂಗ್‌ ಮಾಡೋದಕ್ಕೆ ಬ್ರೇಕ್‌ ಹಾಕೋಕೆ ಫ್ಲೈ ಓವರ್‌ಗಳನ್ನೇ ಬಂದ್‌ ಮಾಡಲಾಗುತ್ತೆ ಅಂತ ಹೇಳಿದ್ದಾರೆ. ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಬೆಂಗಳೂರಿನ ಎಲ್ಲಾ ಫ್ಲೈ ಓವರ್‌ಗಳನ್ನ ಬಂದ್‌ ಮಾಡಲಾಗುತ್ತೆ. ಇನ್ನು ಏರ್‌ಪೋರ್ಟ್‌ ರಸ್ತೆ ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಸಿಸಿಟಿವಿ ಇನ್ಸ್ಟಾಲ್‌ ಮಾಡಲಾಗುತ್ತೆ. ಅಲ್ದೇ ಬಹಳಷ್ಟು ಕಡೆಗಳಲ್ಲಿ ಡ್ರೋನ್‌ ಕ್ಯಾಮೆರಾ ಕಾರ್ಯಾಚರಣೆ ಕೂಡ ನಡೆಯಲಿದೆ. ಇಂದಿರಾನಗರ, ಕೋರಮಂಗಲದ 100 ಅಡಿ ರಸ್ತೆಗಳಲ್ಲಿ ಹೆಚ್ಚಿನ ಸೆಕ್ಯುರಿಟಿ ನೀಡಲಾಗುತ್ತೆ. ಇವೆಲ್ಲದ್ರ ನಡುವೆ ಡ್ರಗ್ಸ್‌ ಸಮಸ್ಯೆಗೆ ಬ್ರೇಕ್‌ ಹಾಕೋಕೆ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಪರಿಶೀಲನೆ ನಡೆಸಲಾಗ್ತಿದೆ. ಇನ್ನು ಹೊಸ ವರ್ಷಾಚರಣೆ ವೇಳೆ ಭದ್ರತೆಗಾಗಿ ಓರ್ವ ಜಂಟಿ ಪೊಲೀಸ್‌ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಇನ್ಸ್‌ಪೆಕ್ಟರ್ಸ್, 600 ಸಬ್‌ಇನ್ಸ್‌ಪೆಕ್ಟರ್ಸ್‌, 600 ಎಎಸ್‌ಐ, 1800 ಹೆಡ್‌ಕಾನ್ಸ್‌ಟೇಬಲ್ಸ್‌ ಮತ್ತು 5,200 ಕಾನ್ಸ್‌ಟೇಬಲ್‌ಗಳನ್ನ ನಿಯೋಜಿಸಲಾಗುತ್ತೆ ಅಂತ ಬಿ. ದಯಾನಂದ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply