ಒಮಿಕ್ರಾನ್ ವೇಷದಲ್ಲಿ ಕೊರೋನಾ: ರಾಜ್ಯದಲ್ಲಿ ಕಟ್ಟೆಚ್ಚರ!

masthmagaa.com:

ಕೊರೋನಾ ಹೊಸದಾಗಿ ಒಮಿಕ್ರಾನ್ ವೇಷ ಹಾಕ್ಕೊಂಡು ಬರ್ತಿರೋದು ಗೊತ್ತಾಗ್ತಿದ್ದಂತೆ ರಾಜ್ಯದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಓಮಿಕ್ರಾನ್ ಹೊಸ ತಳಿ‌ ಬಹಳ ವೇಗವಾಗಿ ಹರಡುತ್ತದೆ ಅಂತಾರೆ. ಹೆಚ್ಚಿನ ವಿವಿರ ಇನ್ನೂ ಸಿಕ್ಕಿಲ್ಲ. ಹೀಗಾಗಿ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗ್ತಿದೆ. ಅದೇ ರೀತಿ ನಮ್ಮಲ್ಲೂ ಬಹಳ ಎಚ್ಚರ ವಹಿಸಿದ್ದೇವೆ ಅಂದ್ರು. ಜೊತೆಗೆ ನಮ್ಮಲ್ಲಿ ಈವರೆಗೆ ಒಮಿಕ್ರಾನ್ ತಳಿ ಯಾರಿಗೂ ಬಂದಿಲ್ಲ. ಆದ್ರೂ ಬೆಂಗಳೂರು, ಮೈಸೂರು ಮತ್ತು ಧಾರವಾಡದ ಹಾಸ್ಟೆಲ್​​ಗಳಲ್ಲಿ ಕೊರೋನಾ ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದ್ದು, ಕಂಟೈನ್ಮೆಂಟ್ ಝೋನ್ ರೀತಿ ಮಾಡಿ‌ ನಿಗಾ ಇಡಲಾಗಿದೆ. ವಿದೇಶಗಳಿಂದ ಬರೋರಿಗೆ ಏರ್ ಪೋರ್ಟ್‌ಗಳಲ್ಲಿ ಪರೀಕ್ಷೆ ನಡೆಸಿ, ನೆಗೆಟಿವ್ ಇದ್ದರೆ ಮಾತ್ರ ಹೊರಗೆ ಬಿಡಲಾಗುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಒಂದು ವಾರದ ಬಳಿಕ ಮತ್ತೆ ಸಭೆ ನಡೆಸಿ, ಮತ್ತಷ್ಟು ನಿರ್ಬಂಧಗಳನ್ನು ವಿಧಿಸಬೇಕಾ..? ಅನ್ನೋ ಬಗ್ಗೆ ನಿರ್ಧರಿಸ್ತೀವಿ ಅಂತ ತಿಳಿಸಿದ್ರು.

ಇನ್ನು ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಮಾರ್ಷಲ್​​ಗಳನ್ನು ನಿಯೋಜಿಸಿದ್ದು, ಮಾಸ್ಕ್ ಹಾಕದವರನ್ನು ಅಡ್ಡಗಟ್ಟಿ ಫೈನ್ ಹಾಕಲಾಗುತ್ತಿದೆ. ಮಾಸ್ಕ್ ಹಾಕದೇ ಬಂದ ಕೆಲವರಂತೂ ಮಾರ್ಷಲ್​​ಗಳನ್ನು ನೋಡಿದ ಕೂಡಲೇ ಓಡಿಹೋಗಿದ್ದು ಕಂಡುಬಂತು. ಇನ್ನು ಪ್ರಮುಖ ಸ್ಥಳಗಳಲ್ಲಿ ಟೆಸ್ಟಿಂಗ್​​ ವ್ಯವಸ್ಥೆ ಕೂಡ ಮಾಡಲಾಗಿದೆ. ಕೊರೋನಾ ಪೀಕ್ ಇದ್ದಾಗ ಹೇಗಿತ್ತೋ ಅದೇ ರೀತಿ ಮಾಸ್ಕ್​ ಪರಿಶೀಲನೆ, ಟೆಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯಗಳಿಂದ ಬರುವವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಬೆಂಗಳೂರಿಗೆ ನವೆಂಬರ್ 1ರಿಂದ 26ರವರೆಗೆ ದಕ್ಷಿಣ ಆಫ್ರಿಕಾದಿಂದ 94 ಮಂದಿ ಬಂದಿದ್ದಾರೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪೈಕಿ ಒಬ್ಬರಿಗೆ ನವೆಂಬರ್ 11ರಂದು, ಮತ್ತೊಬ್ಬರಿಗೆ ನವೆಂಬರ್ 20ರಂದು ಕೊರೋನಾ ಬಂದಿದೆ. ಅವರ ಸ್ಯಾಂಪಲ್ ಟೆಸ್ಟ್​​ಗೆ ಕಳುಹಿಸಿದ್ದು, ಅವರಿಗೆ ಬಂದಿದ್ದು ಒಮಿಕ್ರಾನ್ ಅಲ್ಲ.. ಡೆಲ್ಟಾ ಅನ್ನೋದು ದೃಢವಾಗಿದೆ ಅಂತ ಕೂಡ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply