ಟ್ರಾಫಿಕ್ ಕೇಸ್ ಪ್ರಮಾಣ ಇಳಿಕೆ.. ದಂಡದ ಮೊತ್ತ ಏರಿಕೆ..!

ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆಗಸ್ಟ್‍ಗೆ ಹೋಲಿಸಿದ್ರೆ ಸೆಪ್ಟೆಂಬರ್‍ನಲ್ಲಿ ದಾಖಲಾದ ಕೇಸ್‍ಗಳ ಪ್ರಮಾಣ ಶೇ.30ರಷ್ಟು ಕಡಿಮೆಯಾಗಿದೆ. ಆಗಸ್ಟ್ ತಿಂಗಳಲ್ಲಿ 8.5 ಲಕ್ಷ ಕೇಸ್ ದಾಖಲಾಗಿದ್ರೆ, ಸೆಪ್ಟೆಂಬರ್‍ನಲ್ಲಿ 10.7 ಲಕ್ಷ ಕೇಸ್ ದಾಖಲಾಗಿದೆ. ಆದ್ರೆ ದಂಡ ವಸೂಲಿ ಮೊತ್ತ ಜಾಸ್ತಿಯಾಗಿದೆ. ಆಗಸ್ಟ್‍ನಲ್ಲಿ 8.8 ಕೋಟಿಯಷ್ಟು ವಸೂಲಿಯಾಗಿದ್ರೆ ಸೆಪ್ಟೆಂಬರ್‍ನಲ್ಲಿ 10.7 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ. ಆಗಸ್ಟ್‍ಗೆ ಹೋಲಿಸಿದ್ರೆ ಸೆಪ್ಟೆಂಬರ್‍ನಲ್ಲಿ ಕೇಸ್‍ಗಳ ಪ್ರಮಾಣ ಕಡಿಮೆ ಆದ್ರೂ ಕೂಡ ದಂಡದ ಮೊತ್ತ ಜಾಸ್ತಿ ಇದ್ದಿದ್ದರಿಂದ 2 ಕೋಟಿ ರೂಪಾಯಿ ಹೆಚ್ಚು ವಸೂಲಿಯಾಗಿದೆ.

ಆದ್ರೆ ಈಗ ಮೊದಲಿನಷ್ಟು ದಂಡ ವಿಧಿಸುತ್ತಿಲ್ಲ. ಸೆಪ್ಟೆಂಬರ್ 19ರಂದು ಕೇಂದ್ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ, ದಂಡದ ಮೊತ್ತವನ್ನು ಕಡಿಮೆ ಮಾಡಿದೆ.

Contact Us for Advertisement

Leave a Reply