250 ಕೆಜಿ ಟೊಮೆಟೊ ತುಂಬಿದ್ದ ಗಾಡಿಯನ್ನೇ ಕದ್ದ ಕಳ್ಳರು!

masthmagaa.com:

ಟೊಮೆಟೊ ದರ ಗಗನಕ್ಕೇರಿರುವ ಹಿನ್ನಲೆಯಲ್ಲಿ ಟೊಮೆಟೊ ತುಂಬಿದ್ದ ಟ್ರಕ್‌ ಒಂದನ್ನ ಎತ್ತಾಕೊಂಡ್‌ ಹೋಗಿರೋ ಘಟನೆ ಬೆಂಗಳೂರಿನ ಯಲಹಂಕ ಬಳಿ ನಡೆದಿದೆ. ಕಾರಿನಲ್ಲಿ ಬಂದಿದ್ದ ಮೂವರು ಸುಮಾರು 250 ಕೆಜಿ ಟೊಮೆಟೊ ಇದ್ದ ಬೊಲೆರೊ ಗಾಡಿಯನ್ನ ಹೈಜಾಕ್‌ ಮಾಡಿದ್ದಾರೆ. ಟೊಮೆಟೊ ಗಾಡಿಯನ್ನ ಫಾಲೋ ಮಾಡ್ಕೊಂಡು ಬಂದಿದ್ದ ಆರೋಪಿಗಳು ಗಾಡಿ ಟಚ್ ಆಗುವಂತೆ ಮಾಡಿದ್ದು, ಬಳಿಕ ಗಾಡಿ ಟಚ್ ಆಗಿದೆ ಸೈಡಿಗೆ ಹಾಕಿ ಅಂತ ರೈತನಿಗೆ ಅವಾಜ್ ಹಾಕಿ ಹಲ್ಲೆ ಮಾಡಿದ್ದಾರೆ. ಅಲ್ದೆ ಡ್ರೈವರ್ ಸಮೇತ ಬೊಲೆರೋ ವಾಹನ ಕಿಡ್ನ್ಯಾಪ್ ಮಾಡಿ ಬಳಿಕ ಚಿಕ್ಕಜಾಲ ಬಳಿ ಡ್ರೈವರ್‌ನ ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಂದ್ಹಾಗೆ ಹಿರಿಯೂರಿನಿಂದ ಕೋಲಾರಕ್ಕೆ ಟೊಮೆಟೊವನ್ನ ಬೊಲೆರೋದಲ್ಲಿ ರೈತ ಸಾಗಿಸುತ್ತಿದ್ದರು.

-masthmagaa.com

Contact Us for Advertisement

Leave a Reply