masthmagaa.com:

ಭಾರತದಲ್ಲಿ ಜನವರಿ 16ರಿಂದ ಕೊರೋನಾ ಲಸಿಕೆಯ ಅಭಿಯಾನವೇನೋ ಶುರುವಾಗ್ತಿದೆ. ಆದ್ರೆ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ಮೂಡುವಂತಹ ಘಟನೆಯೊಂದು ನಡೆದಿದೆ. ಏನಾಗಿದೆ ಅಂದ್ರೆ ‘ಕೋವಾಕ್ಸಿನ್​’ ಲಸಿಕೆಯ 3ನೇ ಹಂತದ ಮಾನವ ಪ್ರಯೋಗಕ್ಕೆ ಒಳಗಾಗಿದ್ದ 45 ವರ್ಷದ ಸ್ವಯಂಸೇವಕನೊಬ್ಬ ಮೃತಪಟ್ಟಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಈತನಿಗೆ ಡಿಸೆಂಬರ್ 12ರಂದು ಭಾರತ್​ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆ ಹಾಕಲಾಗಿತ್ತು. ಅದಾಗಿ 9 ದಿನಗಳಲ್ಲಿ ಆತ ಮೃತಪಟ್ಟಿದ್ದಾನೆ.

ಈ ಬಗ್ಗೆ ಭಾರತ್ ಬಯೋಟೆಕ್​ ಕಂಪನಿ ಸ್ಪಷ್ಟನೆ ಕೊಟ್ಟಿದೆ. ಸ್ವಯಂಸೇವಕನು ದಾಖಲಾತಿ ಸಮಯದಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ಇರಬೇಕಿದ್ದ ಎಲ್ಲಾ ಮಾನದಂಡಗಳನ್ನ ಪೂರೈಸಿದ್ದ. ಲಸಿಕೆ ಹಾಕಿದ 7 ದಿನಗಳವರೆಗೆ ಆರೋಗ್ಯವಾಗಿದ್ದ. ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿರಲಿಲ್ಲ. ಲಸಿಕೆ ಪಡೆದ 9 ದಿನಗಳ ನಂತರ ಆತ ಮೃತಪಟ್ಟಿದ್ದಾನೆ. ನಾವು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ ಅನ್ನೋದು ಗೊತ್ತಾಗಿದೆ. ಅಲ್ಲದೆ ಈ ಸ್ವಯಂಸೇವಕನಿಗೆ ಕೊಟ್ಟಿದ್ದು ಅಸಲಿ ಕೊರೋನಾ ಲಸಿಕೆಯೋ ಅಥವಾ ಪ್ಲೆಸಿಬೋ (ಡೂಪ್ಲಿಕೇಟ್​) ಲಸಿಕೆಯೋ ಅನ್ನೋದು ಗೊತ್ತಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾರ್ಡಿಯೊರೆಸ್ಪಿರೇಟರಿ ವೈಫಲ್ಯವೇ ಸಾವಿಗೆ ಕಾರಣ ಅಂತ ಹೇಳಲಾಗಿದೆ. ಸದ್ಯ ಈ ಪ್ರಕರಣವನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಅಂತ ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply