ಭರ್ಜರಿ ಸ್ಪರ್ಧೆಯ ನಡುವೆಯೂ 3 ನೇ ದಿನಕ್ಕೆ ಹೆಚ್ಚಿಗೆಯಾದ ʻಭೋಲಾʼ ಚಿತ್ರದ ಕಲೆಕ್ಶನ್‌!

masthmagaa.com:

ಸೌತ್‌ ಇಂಡಿಯನ್‌ ರಿಮೇಕ್‌ ನಲ್ಲಿ ಮುಳುಗಿ ಹೋಗಿರುವ ಅಜಯ ದೇವಗನ್‌ ಅವರ ʼಭೋಲಾʼ ಸಿನಿಮಾ ಮಾರ್ಚ್‌ 30 ರಂದು ರಿಲೀಸ್‌ ಆಯಿತು. ಮಲಯಾಲಂನ ‘ದೃಶ್ಯಂ 2’ ಚಿತ್ರವನ್ನು ರಿಮೇಕ್ ಮಾಡಿ ಅಜಯ್ ದೇವಗನ್ ಗೆದ್ದಿದ್ದರು. ಇದೇ ನಂಬಿಕೆಮೇರೆಗೆ ಅಜಯ್ ದೇವಗನ್ ಅವರು ‘ಕೈದಿ’ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ‘ಭೋಲಾ’ ಹೆಸರಲ್ಲಿ ಈ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ. ಆದರೆ, ಸಿನಿಮಾ ನಿರೀಕ್ಷೆಯಂತೆ ಪ್ರದರ್ಶನ ಕಾಣುತ್ತಿಲ್ಲ. ಈ ಸಿನಿಮಾ ಮೊದಲ ದಿನ (ಮಾರ್ಚ್​ 30) 11.20 ಕೋಟಿ ರೂಪಾಯಿ, ಎರಡನೇ ದಿನ (ಮಾರ್ಚ್​ 31) 7.40 ಕೋಟಿ ಹಾಗೂ ಮೂರನೇ ದಿನ (ಎಪ್ರಿಲ್‌ 1) 12.10 ಕೋಟಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಶನ್‌ 30.7 ಕೋಟಿ ಆಗಿದೆ. ಮೊದಲೆರಡು ದಿನ ಇಳಿಕೆ ಕಂಡಿದ ಚಿತ್ರದ ಕಲೆಕ್ಶನ್‌ ಮೂರನೇ ದಿನಕ್ಕೆ ತಕ್ಕ ಮಟ್ಟಿಗೆ ಏರಿಕೆ ಕಂಡಿದೆ. ‘ಭೋಲಾ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಇದೆ. ತೆಲುಗಿನಲ್ಲಿ ನಾನಿ ನಟನೆಯ ‘ದಸರಾ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ತೆಲುಗು ಹಾಗೂ ಆಂಧ್ರದಲ್ಲಿ ‘ಭೋಲಾ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಕರ್ನಾಟಕದಲ್ಲಿ ಡಾಲಿ ನಟನೆಯ ‘ಹೊಯ್ಸಳ’ ಸಿನಿಮಾ ಕೂಡ ಕಾಂಪಿಟೇಷನ್ ನೀಡುತ್ತಿದೆ.

-masthmagaa.com

 

Contact Us for Advertisement

Leave a Reply