2022ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗಳಿಸಿದ್ದು? ಇಲ್ನೋಡಿ..

masthmagaa.com:

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಪತ್ನಿ ಜಿಲ್‌ ಬೈಡೆನ್‌, 2022ರಲ್ಲಿ 5.8 ಲಕ್ಷ ಡಾಲರ್‌ ಅಂದ್ರೆ 4.75 ಕೋಟಿ ರೂಪಾಯಿಯನ್ನ ಗಳಿಸಿರೋದು ವರದಿಯಾಗಿದೆ. ಬೈಡೆನ್‌ ದಂಪತಿ ತಮ್ಮ ವಾರ್ಷಿಕ ಆದಾಯ ಹಾಗೂ ತೆರಿಗೆ ರಿಪೋರ್ಟ್‌ನ್ನ ಬಹಿರಂಗಗೊಳಿಸಿದ್ದಾರೆ. 2021ರಲ್ಲಿ ಗಳಿಸಿದ್ದ ಹಣಕ್ಕಿಂತ 30 ಸಾವಿರ ಡಾಲರ್‌ ಕಡಿಮೆ ಆದಾಯವನ್ನ ಗಳಿಸಿರೋದು ರಿಪೋರ್ಟ್‌ನಿಂದ ತಿಳಿದು ಬಂದಿದೆ. ಅಲ್ದೇ 5.8 ಲಕ್ಷ ಡಾಲರ್‌ ಆದಾಯದಲ್ಲಿ ಬಹುತೇಕ ಬೈಡೆನ್‌ರ ಅಧ್ಯಕ್ಷೀಯ ಸ್ಯಾಲರಿ ಹಣ ಇದೆ ಎನ್ನಲಾಗಿದೆ. ಅಲ್ಲಿನ ಸಂಸತ್ತು ಅಧ್ಯಕ್ಷರಿಗೆ ವಾರ್ಷಿಕವಾಗಿ 4 ಲಕ್ಷ ಡಾಲರ್‌ ಸ್ಯಾಲರಿಯನ್ನ ನಿಗದಿ ಮಾಡಿದೆ. ಅದನ್ನ ಬಿಟ್ಟು ಬೈಡೆನ್‌ ಪತ್ನಿ ಜಿಲ್‌ ಬೈಡೆನ್‌ ನಾರ್ಧನ್‌ ವರ್ಜಿನಿಯಾ ಕಮ್ಯುನಿಟಿ ಕಾಲೇಜ್‌ನಲ್ಲಿ ಟೀಚರ್‌ ಆಗಿದ್ದು, ಸುಮಾರು 82 ಸಾವಿರ ಡಾಲರ್‌ನ್ನ ಗಳಿಸಿದ್ದಾರೆ. ಇನ್ನು ಬೈಡೆನ್‌ ದಂಪತಿ ಒಟ್ಟು 1.37 ಲಕ್ಷ ಡಾಲರ್‌ ಅಂದ್ರೆ ಸುಮಾರು 1.1 ಕೋಟಿ ರೂಪಾಯಿಯನ್ನ ತೆರಿಗೆ ರೂಪದಲ್ಲಿ ಪಾವತಿಸಿದ್ದಾರೆ. ಹಾಗೂ 20 ಸಾವಿರ ಡಾಲರ್‌ನ್ನ ದೇಣಿಗೆಯಾಗಿ ನೀಡಿದ್ದಾರೆ ಅಂತ ವರದಿಯಿಂದ ತಿಳಿದು ಬಂದಿದೆ. ಬೈಡೆನ್‌ ತಮ್ಮ 25 ವರ್ಷಗಳ ತೆರಿಗೆ ಪಾವತಿಯನ್ನ ರಿವೀಲ್‌ ಮಾಡಿದ್ದಾರೆ. ಈ ಮೂಲಕ ಪಾರದರ್ಶಕತೆಗೆ ತಾವು ಬದ್ದರಾಗಿರೋದಾಗಿ ಬೈಡೆನ್‌ ತೋರಿಸಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply