ಯುರೋಪ್‌ ಟ್ರಿಪ್‌ ಪ್ರಾರಂಭಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌!

masthmagaa.com:

ಲಿಥುವೇನಿಯಾದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ಮೂರು ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಮೊದಲಿಗೆ ಬ್ರಿಟನ್‌ ತೆರಳಿರುವ ಬೈಡನ್‌, ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಹಾಗೂ ಪ್ರಧಾನಿ ರಿಷಿ ಸುನಾಕ್‌ರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬಳಿಕ ಲಿಥುವೇನಿಯಾಗೆ ತೆರಳಲಿರೋ ಬೈಡನ್‌, ಜುಲೈ 11 ಹಾಗೂ 12ರಂದು ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಯುಕ್ರೇನ್‌ಗೆ ಇನ್ನಷ್ಟು ಸಹಾಯ ಮಾಡೋ ಕುರಿತು ಡಿಸ್‌ಕಸ್‌ ಮಾಡಲಿದ್ದಾರೆ. ಆದ್ರೆ ಯುಕ್ರೇನ್‌ಗೆ ನ್ಯಾಟೋ ಸದಸ್ಯತ್ವ ಕೊಡೋದು ಅನುಮಾನ. ಯಾಕಂದ್ರೆ ಇತ್ತೀಚಿನ ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರೋ ಬೈಡನ್‌, ಯುದ್ಧ ಮುಗಿಯೋವರೆಗೂ ಯುಕ್ರೇನ್‌ಗೆ ನ್ಯಾಟೋ ಮೆಂಬರ್‌ಶಿಪ್‌ ಕೊಡೋದು ಅಸಾಧ್ಯ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ನ್ಯಾಟೋ ಸೇರೋಕೆ ಇಚ್ಛಿಸಿರೋ ಸ್ವಿಡನ್‌ಗೆ ಆದಷ್ಟು ಬೇಗ ಒಪ್ಪಿಗೆ ನೀಡುವಂತೆ ಟರ್ಕಿಗೆ ಬೈಡನ್‌ ಕರೆ ನೀಡಿದ್ದಾರೆ. ಈ ಬಗ್ಗೆ ಟರ್ಕಿ ಅಧ್ಯಕ್ಷ ತಯೀಪ್‌ ಎರ್ಡೋಆನ್‌ ಅವ್ರ ಜೊತೆ ಫೋನ್‌ಕಾಲ್‌ನಲ್ಲಿ ಮಾತಾಡಿರೋ ಬೈಡನ್‌, ಸ್ವಿಡನ್‌ನನ್ನ ನ್ಯಾಟೋಗೆ ಸ್ವಾಗತಿಸೋಕೆ ಉತ್ಸುಕರಾಗಿರೋದಾಗಿ ಹೇಳಿದ್ದಾರೆ. ಈ ಮೂಲಕ ಸ್ವಿಡನ್‌ ನ್ಯಾಟೋ ಬಿಡ್‌ನ್ನ ಕಂಪ್ಲೀಟ್‌ ಮಾಡುವಂತೆ ಟರ್ಕಿಗೆ ಬೈಡನ್‌ ತಿಳಿಸಿದ್ದಾರೆ. ಅಂದ್ಹಾಗೆ ಖುರ್ದಿಶ್‌ ಶಂಕಿತ ಭಯೋತ್ಪಾದಕರನ್ನ ಒಪ್ಪಿಸುವಂತೆ ಸ್ವಿಡನ್‌ ಮುಂದೆ ಟರ್ಕಿ ಡಿಮ್ಯಾಂಡ್‌ ಇಟ್ಟಿದೆ. ಈ ಡಿಮ್ಯಾಂಡ್‌ ಪೂರೈಸದ ಕಾರಣ ಸ್ವಿಡನ್‌ನ ಬಿಡ್‌ನ್ನ ಟರ್ಕಿ ಇನ್ನೂ ಕ್ಲಿಯರ್‌ ಮಾಡಿಲ್ಲ. ಇತ್ತ ಇತೀಚೆಗೆ ಹೊಸದಾಗಿ ನ್ಯಾಟೋ ಸದಸ್ಯ ಪಡೆದಿರೋ ಫಿನ್‌ಲ್ಯಾಂಡ್‌ಗೂ ಬೈಡನ್‌ ಭೇಟಿ ನೀಡಿ ತಮ್ಮ ಯುರೋಪ್‌ ಪ್ರವಾಸವನ್ನ ಮುಗಿಸಲಿದ್ದಾರೆ.

-masthmagaa.com

Contact Us for Advertisement

Leave a Reply