ಜೋ ಬೈಟೆನ್ – ಪುಟಿನ್ ಮುಖಾಮುಖಿ! ಏನಾಗುತ್ತೆ ಈಗ?!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ ಭೇಟಿಯಾಗಲಿದ್ದಾರೆ. ಬೈಡೆನ್ ಅಧ್ಯಕ್ಷರಾದ ಬಳಿಕ ಪುಟಿನ್ ಭೇಟಿಯಾಗ್ತಿರೋದು ಇದೇ ಮೊದಲು. ಯುಕ್ರೇನ್ ವಿಚಾರ, ಸೈಬರ್ ದಾಳಿ ವಿಚಾರ, ಅಮೆರಿಕದ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಅನ್ನೋ ಆರೋಪದಿಂದಾಗಿ ಉಭಯ ದೇಶಗಳ ಸಂಬಂಧ ಹದಗೆಟ್ಟು ಹೋಗಿದೆ. ಇಂಥಾ ಟೈಮಲ್ಲೇ ವಿಶ್ವದ ಎರಡು ಪವರ್ಫುಲ್ ದೇಶಗಳ ನಾಯಕರು ಭೇಟಿಯಾಗ್ತಿರೋದು ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ. ಭೇಟಿ ವೇಳೆ ಇಬ್ಬರು ನಾಯಕರು ಏನೇನು ಮಾತುಕತಡ ನಡೆಸಲಿದ್ದಾರೆ, ಯಾವ್ಯಾವ ವಿಚಾರಗಳು ಪ್ರಸ್ತಾಪವಾಗಲಿದೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ. ನ್ಯೂಕ್ಲಿಯರ್ ಸ್ಟೆಬಿಲಿಟಿ, ಕ್ಲೈಮೇಟ್ ಚೇಂಜ್, ಸೈಬರ್ ಸೆಕ್ಯೂರಿಟಿ ಮತ್ತು ಎರಡೂ ದೇಶಗಳ ಜೈಲಿನಲ್ಲಿರೋ ಅಮೆರಿಕ-ರಷ್ಯಾ ಪ್ರಜೆಗಳ ಬಿಡುಗಡೆ ಮುಂತಾದ ವಿಚಾರಗಳೇ ಭೇಟಿಯ ಅಜೆಂಡಾ ಅಂತ ಹೇಳಲಾಗ್ತಿದೆ. ಅಂದ್ಹಾಗೆ ರಷ್ಯಾದ ಗುಪ್ತಚರ ಸಂಸ್ಥೆಯ ಮಾಜಿ ಆಪರೇಟಿವ್ ಪುಟಿನ್ ಒಬ್ಬ ಕಿಲ್ಲರ್ ಅಂತ ಮಾರ್ಚ್ನಲ್ಲಿ ಬೈಡೆನ್ ಹೇಳಿದ್ದರು. ಜೊತೆಗೆ ಯುಕ್ರೇನ್ ವಿಚಾರವಾಗಿ ಎರಡು ದೇಶಗಳ ಸಂಘರ್ಷ ಜೋರಾಗಿತ್ತು. ಇದೆಲ್ಲದರ ಪರಿಣಾಮ ಎರಡೂ ದೇಶಗಳು ವಿರೋಧಿ ದೇಶದ ರಾಜತಾಂತ್ರಿ ಅಧಿಕಾರಿಗಳನ್ನ ಗಡಿಪಾರು ಮಾಡಿ, ಕೆಲವೊಂದು ಸ್ಯಾಂಕ್ಷನ್ಗಳನ್ನ ಹೇರಿದ್ವು. ಇದೀಗ ಆ ದೇಶದ ನಾಯಕರೇ ಮುಖಾಮುಖಿ ಆಗ್ತಿದ್ದಾರೆ. ಇನ್ನು ಈ ಭೇಟಿ ನಡೆಯುತ್ತಿರೋ ಸ್ಥಳ – ಜಿನೆವಾ ಕೂಡ ತುಂಬಾ ಇಂಪಾರ್ಡೆಂಟ್. ಅಮೆರಿಕ ಮತ್ತು ರಷ್ಯಾ ಅಧ್ಯಕ್ಷರು ಜಿನಿವಾದಲ್ಲಿ ಮೂರುಸಲ ಭೇಟಿಯಾಗಿದ್ದಾರೆ. ಮೊದಲಸಲ ಅಮೆರಿಕ ಅಧ್ಯಕ್ಷ ಐಸೆನ್ಹೋವರ್ ಮತ್ತು ಸೋವಿಯತ್ ನಾಯಕ ನಿಕಿತಾ ಖ್ರುಷೆವ್, ಎರಡನೇಸಲ 30 ವರ್ಷಗಳಾದ ಬಳಿಕ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೀಗನ್ ಮತ್ತು ಮಿಖಾಯಿಲ್ ಗೋರ್ಬಚೆವ್. ಸೋವಿಯತ್ ಯೂನಿಯನ್ ಅಂತ್ಯಕ್ಕೆ ದಾರಿಮಾಡಿಕೊಟ್ಟ ಪ್ರಮುಖ ಬೆಳವಣಿಗೆ ಇದು ಅಂತ ಹೇಳಲಾಗುತ್ತೆ. ಈಗ ಮೂರನೇಸಲ ಬೈಡೆನ್ ಮತ್ತು ಪುಟಿನ್ ಅದೇ ಜಿನಿವಾದಲ್ಲಿ ಮೀಟ್ ಆಗ್ತಿದ್ದಾರೆ.

Contact Us for Advertisement

Leave a Reply