ಯುಕ್ರೇನ್‌ಗೆ ಅಮೇರಿಕದಿಂದ ಮತ್ತೊಮ್ಮೆ ರಕ್ಷಣಾ ನೆರವು!

masthmagaa.com:

ಪರೋಕ್ಷವಾಗಿ ತನ್ನ ಆಯುಧಗಳ ಮೂಲಕ ಹೆಚ್ಚು ಕಡಿಮೆ ರಷ್ಯಾದೊಂದಿಗೆ ಯುದ್ಧ ಮಾಡ್ತಿರೋ ಅಮೇರಿಕ ಈಗ ಯುಕ್ರೇನ್‌ಗೆ ಮತ್ತೊಂದು ರಕ್ಷಣಾ ನೆರವಿನ ಪ್ಯಾಕೇಜ್‌ ಘೋಷಿಸಲಿದೆ ಅಂತ ಹೇಳಲಾಗ್ತಿದೆ. ಮೂಲಗಳ ಪ್ರಕಾರ ಇದು ಕಳೆದ ವಾರ ಅನೌನ್ಸ್‌ ಮಾಡಿದ ಪ್ಯಾಕೇಜ್‌ನಷ್ಟೇ ಗಾತ್ರ ಅಂದ್ರೆ 800 ಬಿಲಿಯನ್‌ ಡಾಲರ್‌ (ನಮ್ಮ ರುಪಾಯಿ ಲೆಕ್ಕದಲ್ಲಿ ಸುಮಾರು 60 ಲಕ್ಷ ಕೋಟಿ) ಮೌಲ್ಯದ್ದಾಗಿರಲಿದೆ. ಇನ್ನೊಂದ್‌ ಕಡೆ ಅಮೇರಿಕ ಅಧ್ಯಕ್ಷ ಜೋ ಬೈಡನ್‌ ತಾನು ಯುಕ್ರೇನ್‌ಗೆ ಭೇಟಿ ನೀಡ್ತಿನೋ ಇಲ್ವೋ ಗೊತ್ತಿಲ್ಲ ಅಂತ ಹೇಳಿದ್ದಾರೆ. ನೆನ್ನೆ ಶ್ವೇತಭವನ ಬೈಡನ್‌ ಯುಕ್ರೇನ್‌ಗೆ ಹೋಗಲ್ಲ ಅಂತ ಹೇಳಿತ್ತು, ಈವಾಗ ಬೈಡನ್‌ ಈವೆಂಟ್‌ ಒಂದ್ರಲ್ಲಿ ನಂಗೊತ್ತಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply