ಹಲವು ದೇಶಗಳಿಗೆ ರಾಯಭಾರಿ ನಾಮ ನಿರ್ದೇಶನ ಮಾಡಿದ ಬೈಡೆನ್​​!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮೊಟ್ಟ ಮೊದಲ ಬಾರಿಗೆ ಕೆಲವೊಂದು ದೇಶಗಳಿಗೆ ರಾಯಭಾರಿಗಳನ್ನು ನೇಮಕ ಮಾಡಿದ್ದಾರೆ. ಮಧ್ಯಪ್ರಾಚ್ಯ, ಸೆಂಟ್ರಲ್ ಅಮೆರಿಕ ಮತ್ತು ರಷ್ಯಾದ ಜೊತೆಗಿನ ಕೆಲವೊಂದು ಸವಾಲುಗಳನ್ನು ಎದುರಿಸಲು ಹಲವು ದೇಶಗಳಿಗೆ ರಾಯಭಾರಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ಮಾರ್ಗನ್ ಸ್ಟ್ಯಾನ್ಲಿ ಕಂಪನಿಯ ಉಪ ಮುಖ್ಯಸ್ಥ ಥಾಮಸ್ ನೈಡ್ಸ್​ರನ್ನು ಇಸ್ರೇಲ್ ರಾಯಭಾರಿಯಾಗಿ ಶಿಫಾರಸು ಮಾಡಿದ್ದಾರೆ. ಅದೇ ರೀತಿ ಮೆಕ್ಸಿಕೋಗೆ ಸ್ಪ್ಯಾನಿಶ್ ಮಾತನಾಡಬಲ್ಲ ಮಾಜಿ ಸೆನೇಟರ್​ ಕೆನ್ ಸಲಜಾರ್​ರನ್ನು ನಾಮನಿರ್ದೇಶನ ಮಾಡಿದ್ದಾರೆ. ಯಾಕಂದ್ರೆ ಮೆಕ್ಸಿಕೋದಲ್ಲೂ ಸ್ಪ್ಯಾನಿಶ್ ಭಾಷೆಯನ್ನೇ ಮಾತನಾಡಲಾಗುತ್ತೆ. ನ್ಯಾಟೋದ ವಾಷಿಂಗ್ಟನ್ ಪ್ರತಿನಿಧಿಯಾಗಿ ಜೂಲಿಯನ್ ಸ್ಮಿತ್​​ ಹೆಸರು ನಾಮನಿರ್ದೇಶನ ಮಾಡಿದ್ದಾರೆ. ಹೀಗೆ ಒಟ್ಟು 9 ರಾಯಭಾರಿಗಳ ಹೆಸರನ್ನು ನಾಮ ನಿರ್ದೇಶನ ಮಾಡಿದ್ದು, ಸೆನೆಟ್​​ನಲ್ಲಿ ಇವರ ಹೆಸರು ಅಂತಿಮವಾಗುವವರೆಗೆ ಇವರು ರಾಯಭಾರಿಗಳಾಗೋದಿಲ್ಲ. ಸೆನೆಟ್​​ನಲ್ಲಿ ಒಪ್ಪಿದ ಬಳಿಕ ಇವರು ರಾಯಭಾರಿಯಾಗಿ ಆಯ್ಕೆಯಾದಂತಾಗುತ್ತೆ.

-masthmagaa.com

Contact Us for Advertisement

Leave a Reply