ಚೀನಾ, ರಷ್ಯಾ ವಿರುದ್ಧ ಜೋ ಬೈಡೆನ್ ಕೆಂಡಾಮಂಡಲ!

masthmagaa.com:

ಸ್ಕಾಟ್​ಲ್ಯಾಂಡ್​​ನ ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಚೀನಾ ಮತ್ತು ರಷ್ಯಾ ಅಧ್ಯಕ್ಷರು ಭಾಗಿಯಾಗಿಲ್ಲ. ಇದಕ್ಕೆ ಕೆರಳಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಈ ರೀತಿ ಕ್ಲೈಮೇಟ್ ಎಕ್ಸ್​ಚೇಂಜ್​​ನಲ್ಲಿ ಭಾಗಿಯಾಗದಿರೋದು ದೊಡ್ಡ ತಪ್ಪು ಅಂತ ಹೇಳಿದ್ದಾರೆ. ಇದು ಚೀನಾ ವಿಶ್ವಮಟ್ಟದಲ್ಲಿ ಹೊಸ ಪಾತ್ರವನ್ನು ನಿಭಾಯಿಸಿ, ವಿಶ್ವದ ಲೀಡರ್ ಆಗೋಕೆ ಪ್ರಯತ್ನಿಸುತ್ತಿದೆ ಅನ್ನೋ ಅಂಶವನ್ನು ತೋರಿಸ್ತಿಲ್ಲ. ಇದೊಂದು ದೈತ್ಯ ಸಮಸ್ಯೆಯಾಗಿದ್ದು, ಅವರು ಅದ್ರಿಂದ ಹೊರನಡೆದಿದ್ದಾರೆ. ಹೀಗೆ ಮಾಡಿದ್ರೆ ವಿಶ್ವದ ನಾಯಕತ್ವ ಹೊಂದಲು ಹೇಗೆ ಸಾಧ್ಯವಾಗುತ್ತೆ. ವಿಶ್ವಕ್ಕೆ ಚೀನಾ ಏನು ಕೊಡ್ತಿದೆ ಅಂತ ಇಡೀ ಪ್ರಪಂಚ ಅವರ ಕಡಗೆ ನೋಡ್ತಿದೆ ಅಂತ ಜೋ ಬೈಡೆನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply