ನಮಗೆ ತೊಂದರೆ ಆಗ್ತಿದೆ ನೀವು ಯುದ್ದ ನಿಲ್ಸಿ! ರಷ್ಯಾಗೆ ಪಾಕಿಸ್ತಾನ ತಾಕೀತು!

masthmagaa.com:

ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ ಅನ್ನೋ ಹಾಗೇ ಅಮೆರಿಕ ಹಾಗೂ ಮಿತ್ರರ ನಂಬ್ಕೊಂಡು ರಷ್ಯಾ ಜೊತೆಗೆ ಯುದ್ಧಕ್ಕಿಳಿದ ಯುಕ್ರೇನ್‌ ಈಗ ಅಕ್ಷರಶಃ ಅದರ ಪರಿಣಾಮವನ್ನ ಅನುಭವಿಸ್ತಾ ಇದೆ. ರಷ್ಯಾ ಜೊತೆಗೆ ಸ್ಪರ್ಧೆಗೆ ಇಳಿದು ಈಗಾಗಲೇ 20 ಪರ್ಸೆಂಟ್‌ನಷ್ಟು ಭೂ ಭಾಗವನ್ನೂ ಕಳ್ಕೊಂಡು, ಲಕ್ಷಾಂತರ ಜನ ಸೈನಿಕರನ್ನೂ ಕಳೆದುಕೊಂಡು, ಅದೆಷ್ಟೋ ಬಿಲಿಯನ್‌ ಡಾಲರ್‌ನಷ್ಟು ಆಸ್ತಿಯನ್ನೂ ಕಳ್ಕೊಂಡಿರೋ ಯುಕ್ರೇನ್‌ಗೆ ಈಗ ಅಮೆರಿಕ ಹಾಗೂ ಮಿತ್ರರೇ ಶಾಕ್‌ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಯುಕ್ರೇನ್‌ಗೆ ನಾವು ಯುದ್ಧ ವಿಮಾನಗಳನ್ನ ಕೊಡೋದಿಲ್ಲ ಅಂತ ಯುರೋಪಿನ ಬಲಿಷ್ಠ ಶಕ್ತಿ ಜರ್ಮನಿ ಹೇಳಿತ್ತು. ಆ ಮೂಲಕ ನಾವು ಯುಕ್ರೇನ್‌ ಕೇಳಿದ್ದೆಲ್ಲಾವನ್ನೂ ಕೊಡೋಕಾಗಲ್ಲ ಅನ್ನೋ ಸಂದೇಶ ಕೊಟ್ಟಿತ್ತು. ಇದೀಗ ಖುದ್ದು ಅಮೆರಿಕ ಕೂಡ ನಾವು ಯುಕ್ರೇನ್‌ಗೆ ಯುದ್ದವಿಮಾನಗಳನ್ನ ಕೊಡೋಕಾಗಲ್ಲ ಅಂತ ಹೇಳಿದೆ. ಕಳೆದ ಕೆಲ ದಿನಗಳಿಂದ ಯುಕ್ರೇನ್‌, ನಾವು ರಷ್ಯಾ ವಿರುದ್ದ ತುಂಬಾ ಪರಿಣಾಮಕಾರಿಯಾಗಿ ಹೋರಾಡಿ ಅವರಿಗೆ ಹೆಚ್ಚು ನಷ್ಟ ಮಾಡಬೇಕು ಅಂದ್ರೆ ನಮಗೆ ಯುದ್ದವಿಮಾನಗಳ ಅವಶ್ಯಕತೆ ಇದೆ. ದಯವಿಟ್ಟು ನಮಗೆ ಯುದ್ದವಿಮಾನಗಳನ್ನ ಕೊಡಿ ಅಂತ ಮನವಿ ಮಾಡ್ತಾನೇ ಇತ್ತು. ಇದಕ್ಕೆ ಅಮೆರಿಕ ಹಾಗೂ ಮಿತ್ರರು ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದ್ರೆ ಈಗ ಜರ್ಮನಿ ಬಳಿಕ ಅಮೆರಿಕ ಕೂಡ ಯುಕ್ರೇನ್‌ ಮನವಿಯನ್ನ ತಿರಸ್ಕರಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನ ನೀವು ಯುಕ್ರೇನ್‌ಗೆ ಯುದ್ದವಿಮಾನ ಕೊಡ್ತೀರಾ? ಎಫ್‌ 16 ಯುದ್ದವಿಮಾನವನ್ನ ಕೊಡಬೇಕು ಅಂತ ಯುಕ್ರೇನ್‌ ಮನವಿ ಮಾಡ್ತಿದೆಯಲ್ಲಾ ಅಂತ ಪತ್ರಕರ್ತರು ಪ್ರಶ್ನೆಮಾಡಿದ್ರು. ಅದಕ್ಕೆ ಬೈಡೆನ್‌ ಸಿಂಪಲ್ಲಾಗಿ ನೋ ಅಂತ ಉತ್ತರ ಕೊಟ್ಟಿದ್ದಾರೆ. ಇನ್ನು ಈ ಕಡೆ ಏಷ್ಯಾದ ರೋಗಿ ಪಾಕಿಸ್ತಾನ ರಷ್ಯಾಗೆ ಯುದ್ದ ನಿಲ್ಲಿಸುವಂತೆ ತಾಕೀತು ಮಾಡಿದೆ. ಪಾಕಿಸ್ತಾನದ ಫಾರಿನ್‌ ಮಿನಿಸ್ಟರ್‌ ಭಿಲಾವಲ್‌ ಭುಟ್ಟೋ ಜರ್ಧಾರಿ ರಷ್ಯಾಗೆ ಓಡಿ ಹೋಗಿದ್ದು ಅಲ್ಲಿನ ಫಾರಿನ್‌ ಮಿನಿಸ್ಟರ್‌ ಸರ್ಗೇಲಾವ್ರೋ ಜೊತೆಗೆ ಮಾತುಕತೆ ಮಾಡಿದ್ದಾರೆ. ಈ ವೇಳೆ ಯುಕ್ರೇನ್‌ ಜೊತೆಗೆ ರಷ್ಯಾ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತ ನಾವು ಬಯಸ್ತೀವಿ. ಯುದ್ದದಿಂದ ಪಾಕಿಸ್ತಾನದಂತಹ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ತುಂಬಾ ಸಮಸ್ಯೆ ಉಂಟಾಗಿದೆ..ದಯವಿಟ್ಟು ಇದನ್ನ ನಿಲ್ಸಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply