ಚೀನಾಗೆ ಜೋ ಬೈಡೆನ್ ಹೊಸ ಶಾಕ್! ಏನದು?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಘರ್ ಫೋರ್ಸ್​​ಡ್​​ ಲೇಬರ್ ಪ್ರಿವೆನ್ಶನ್​​​ ಆಕ್ಟ್​​​​ಗೆ ಸೈನ್ ಹಾಕಿದ್ದಾರೆ. ಈ ಮೂಲಕ ಶಿಂಜಿಯಾಂಗ್​ನಿಂದ ಆಮದಾಗುವ ಬಹುತೇಕ ಎಲ್ಲಾ ವಸ್ತುಗಳನ್ನು ನಿರ್ಬಂಧಿಸಲು ಈ ಕಾನೂನು ಅವಕಾಶ ನೀಡುತ್ತೆ. ಈ ಪ್ರಾಂತ್ಯದಲ್ಲಿ ಬಲವಂತವಾಗಿ ನೌಕರರಿಂದ ವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿರೋ ಹಿನ್ನೆಲೆಯಲ್ಲಿ ಬೈಡೆನ್ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಆದ್ರೆ ಯಾವ ಕಂಪನಿಗಳು ತಮ್ಮ ವಸ್ತುಗಳು ಬಲವಂತವಾಗಿ ಉತ್ಪಾದನೆಯಾಗಿಲ್ಲ ಅನ್ನೋದಕ್ಕೆ ಸೂಕ್ತ ದಾಖಲೆಗಳನ್ನು ನೀಡುತ್ತವೆಯೋ ಅಂತಹ ಕಂಪನಿಗಳ ವಸ್ತುಗಳಿಗೆ ಯಾವುದೇ ನಿರ್ಬಂಧ ಇಲ್ಲ ಅಂತ ಕೂಡ ಕಾನೂನಿನಲ್ಲಿ ಹೇಳಲಾಗಿದೆ. ಅಂದಹಾಗೆ ಶಿಂಜಿಯಾಂಗ್​​ನಲ್ಲಿ ಉಘರ್ ಮುಸ್ಲಿಮರಿಂದ ಬಲವಂತವಾಗಿ ಉತ್ಪಾದಿಸುವ ಹತ್ತಿ ಉತ್ಪನ್ನ, ಪಾಲಿಸಿಲಿಕಾನ್, ಸೋಲಾರ್ ಪ್ಯಾನಲ್​​ಗಳಿಗೆ ಬಳಸೋ ಉತ್ಪನ್ನಗಳು ಈ ನಿರ್ಬಂಧದ ವ್ಯಾಪ್ತಿಗೆ ಒಳಗೊಳ್ಳಲಿವೆ.

-masthmagaa.com

Contact Us for Advertisement

Leave a Reply