ರಷ್ಯಾ-ಯುಕ್ರೇನ್ ಸಂಘರ್ಷ: ಪುಟಿನ್​ಗೆ ಕಾಲ್ ಮಾಡಿದ ಬೈಡೆನ್

masthmagaa.com:

ಯುಕ್ರೇನ್ ಗಡಿ ಮತ್ತು ಕ್ರೈಮಿಯಾದಲ್ಲಿ ಕಳೆದ ಕೆಲ ದಿನಗಳಿಂದ ರಷ್ಯಾ ತನ್ನ ಸೇನಾ ಜಮಾವಣೆಯನ್ನ ಹೆಚ್ಚಿಸಿರೋ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಫೋನ್ ಮಾಡಿ ಮಾತನಾಡಿದ್ದಾರೆ. ಜೋ ಬೈಡೆನ್ ಅಧಿಕಾರ ವಹಿಸಿಕೊಂಡ ಬಳಿಕ ವೈಟ್​ ಹೌಸ್ ಮತ್ತು ಕ್ರೆಮ್ಲಿನ್ ನಡುವೆ ಮಾತುಕತೆ ನಡೆದಿರೋದು ಇದು ಎರಡನೇ ಸಲ. ಮಾತುಕತೆ ವೇಳೆ ಯುಕ್ರೇನ್ ಗಡಿಯಲ್ಲಿ ರಷ್ಯಾ ಸೃಷ್ಟಿಸಿರೋ ಸಂಘರ್ಷದ ವಾತಾವರಣವನ್ನ ಕಮ್ಮಿ ಮಾಡುವಂತೆ ಮತ್ತು ಯುಕ್ರೇನ್ ವಿಚಾರವಾಗಿ ಮೂರನೇ ದೇಶದಲ್ಲಿ ಮಾತನಾಡಲು ಅಮೆರಿಕ ರೆಡಿ ಇದೆ ಅಂತ ಬೈಡೆನ್ ಹೇಳಿದ್ದಾರೆ. ಆದ್ರೆ ಪುಟಿನ್ ಮತ್ತು ಬೈಡೆನ್ ಮಾತುಕತೆ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಅಂತ ರಷ್ಯಾ ಹೇಳಿದೆ. ಅಂದ್ಹಾಗೆ ಅಮೆರಿಕದ ಎರಡು ಯುದ್ಧನೌಕೆಗಳು ಈ ವಾರ ಕಪ್ಪು ಸಮುದ್ರಕ್ಕೆ ಇಳಿಯಲಿವೆ. ಈ ಬಗ್ಗೆ ಅಮೆರಿಕವನ್ನ ಎಚ್ಚರಿಸಿರೋ ರಷ್ಯಾ ಸರ್ಕಾರ, ನಿಮ್ಮ ಯುದ್ಧನೌಕೆಗಳು ಕ್ರೈಮಿಯಾ ಸುತ್ತಮುತ್ತ ಬರದಂತೆ ನೋಡಿಕೊಳ್ಳಿ. ಇದು ನಿಮಗೇನೇ ಒಳ್ಳೇದು ಅಂತ ಹೇಳಿದೆ. 2014ರಲ್ಲಿ ಯುಕ್ರೇನ್​ನಿಂದ ಕ್ರೈಮಿಯಾವನ್ನ ರಷ್ಯಾ ವಶಪಡಿಸಿಕೊಂಡ ಬಳಿಕ ಇಲ್ಲಿವರೆಗೂ ಯುಕ್ರೇನ್​-ರಷ್ಯಾ ಗಡಿಯಲ್ಲಿ ಸಂಘರ್ಷ ನಡೀತಾನೇ ಇದೆ. ಇದರಲ್ಲಿ 14,000 ಜನ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಯುಕ್ರೇನ್ ಹೇಳ್ತಿದೆ.

-masthmagaa.com

Contact Us for Advertisement

Leave a Reply