ಜೂನ್ 23 ರಿಂದ ಬಿಗ್ ಬಾಸ್ ಕನ್ನಡ ಸೆಕೆಂಡ್ ಇನಿಂಗ್ಸ್ ಆರಂಭ!!

masthmagaa.com:

ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಬುಧವಾರ(ಜೂ.23) ಶುರುವಾಗಲಿದೆ. ಬಿಗ್ ಬಾಸ್ ಸೀಸನ್ ಅನ್ನ ಅರ್ಧಕ್ಕೆ ಸ್ಥಗಿತಗೊಳಿಸಿದಾಗ  ಅಭಿಮಾನಿಗಳಿಗೆ ಮತ್ತು ಮನೆಯೊಳಗಿದ್ದ 12 ಮಂದಿ ಸ್ಪರ್ಧಿಗಳಿಗೆ  ತುಂಬಾ ಬೇಸರವಾಗಿತ್ತು. ಇದೀಗ ಕೊರೋನಾ ಸೋಂಕಿನ ಎರಡನೇ ಅಲೆ ಕಡಿಮೆಯಾಗಿರುವ ಕಾರಣ ಸರ್ಕಾರ ನಿರ್ಬಂಧವನ್ನು ಸಡಿಲಗೊಳಿಸಿದೆ. ಹಾಗಾಗಿ ಕಲರ್ಸ್ ಕನ್ನಡ ವಾಹಿನಿ ರಿಯಾಲಿಟಿ ಶೋವನ್ನ ಮತ್ತೆ ಆರಂಭಿಸುತ್ತಿದೆ. ಇದನ್ನ ಎರಡನೇ ಇನ್ಸಿಂಗ್ಸ್ ಎಂದು ವಾಹಿನಿ ಕರೆದಿದೆ.

ಅರ್ಧಕ್ಕೆ ನಿಂತಿದ್ದ ಕನಸು ಮುಂದುವರಿಯುತ್ತಾ ಅಥವಾ ಹೊಸ ಕನಸು ಶುರು ಆಗುತ್ತಾ ಇದೇ ಬುಧವಾರ ಮೊದಲ ಮಹಾಸಂಚಿಕೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ. ಹೊಸ ಸಂಚಿಕೆಯಲ್ಲಿ ಹಳೆ ಸ್ಪರ್ಧಿಗಳೇ ಇರುತ್ತಾರೆಯೇ ಅಥವಾ ಹೊಸಬರ ಸೇರ್ಪಡೆಯಾಗುತ್ತದೆಯೇ ಎಂದು ಗುಟ್ಟು ಬಿಟ್ಟುಕೊಟ್ಟಿಲ್ಲ ವಾಹಿನಿ. ಮಹಾ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಭಾಗವಹಿಸಬಹುದು ಎಂಬ ಅನುಮಾನವಿದೆ.

– masthmagaa.com

Contact Us for Advertisement

Leave a Reply