ಬಿಗ್‍ಬಾಸ್‍ನಲ್ಲಿ ಕಪಲ್ಸ್ ಒಟ್ಟಿಗೆ ಮಲಗಲು ಅವಕಾಶ, `ನಮೋ’ ದೂರು..!

ಬಿಗ್‍ಬಾಸ್ 13ನೇ ಆವೃತ್ತಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿ ಟಿಆರ್‍ಪಿಗಾಗಿ ಬಿಗ್‍ಬಾಸ್‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ರಾತ್ರಿ 10.30ರ ನಂತರ ಕಾರ್ಯಕ್ರಮ ಪ್ರಸಾರ ಮಾಡಲು ಬಿಗ್ ಬಾಸ್ ತಂಡ ನಿರ್ಧರಿಸಿದೆ. ಈ ಬಾರಿ ಕಾರ್ಯಕ್ರಮವನ್ನು ಸ್ವಲ್ಪ ಮಸಾಲೆ ಬೆರೆಸಿ ಬೋಲ್ಡ್ ಆಗಿ ಮಾಡಲಾಗಿದೆ. ಇದೇ ಕಾರಣಕ್ಕೆ ತಡವಾಗಿ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ ಅಂತ ಹೇಳಲಾಗಿತ್ತಿದೆ. ಆದ್ರೆ ಈ ಸಲ ಬಿಗ್ ಬಾಸ್ ಮನೆಯಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಮಲಗಲು ಅವಕಾಶ ನೀಡಲಾಗಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ.

ಈ ವಿಚಾರವನ್ನು ಪ್ರಧಾನಿ ಮೋದಿಯವರ ತನಕ ಮುಟ್ಟಿಸಲು ನೆಟ್ಟಿಗರು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಜಿಹಾದಿ ಬಿಗ್ ಬಾಸ್, ಬಾಯ್‍ಕಾಟ್ ಬಿಗ್ ಬಾಸ್ ಹ್ಯಾಶ್ ಟ್ಯಾಗ್ ಟ್ರೆಂಡ್ ಶುರುವಾಗಿದೆ. ಎರಡೂ ಹ್ಯಾಶ್ ಟ್ಯಾಗ್ ಮೂಲಕ ನೆಟ್ಟಿಗರು ಬಿಗ್‍ಬಾಸ್‍ನಲ್ಲಿ ಅಶ್ಲೀಲತೆ ಪ್ರದರ್ಶನವನ್ನು ವಿರೋಧಿಸಿದ್ದಾರೆ.

Contact Us for Advertisement

Leave a Reply