ಬಿಹಾರ ಶಾಲೆಗಳಿಗೆ ಹಿಂದೂ ಹಬ್ಬಗಳಿಗಿಲ್ಲ ರಜೆ! ಉರ್ದು ಶಾಲೆಗಳಿಗೆ ಹೆಚ್ಚುವರಿ ಹಾಲಿ ಡೇ!

masthmagaa.com:

ಬಿಹಾರ ಸರ್ಕಾರ ಅಲ್ಲಿನ ಶಾಲೆಗಳಲ್ಲಿ 2024ರ ಎರಡೆರಡು ಕ್ಯಾಲೆಂಡರ್‌ಗಳನ್ನ ಪ್ರಕಟಿಸಿ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಉರ್ದು ಶಾಲೆಗಳು ಹಾಗೂ ಇನ್ನಿತರ ಶಾಲೆಗಳಲ್ಲಿ ಡಿಫ್ರೆಂಟ್‌ ಶಾಲಾ ರಜೆಗಳ ಪಟ್ಟಿ‌ ಬಿಡುಗಡೆ ಮಾಡಿದೆ. ಈ ಹೊಸ ಕ್ಯಾಲೆಂಡರ್‌ಗಳಲ್ಲಿ ಪ್ರಕಾರ ಮಹಾ ಶಿವರಾತ್ರಿ, ರಕ್ಷಾ ಬಂಧನ, ಛತ್ತ ಪೂಜಾ, ಜನ್ಮಾಷ್ಟಮಿಗಳ ಹಬ್ಬಗಳ ರಜೆಗಳನ್ನ ಕೈಬಿಡಲಾಗಿದೆ. ಆದ್ರೆ ಉರ್ದು ಮಾಧ್ಯಮ ಶಾಲೆಗಳಲ್ಲಿ ಪ್ರತಿ ಶುಕ್ರವಾರ ರಜೆ ನೀಡಲಾಗಿದೆ. ಈ ಕಾರಣಕ್ಕೆ ನಿತೀಶ್‌ ಕುಮಾರ್‌ ಸರ್ಕಾರ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ. ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಬಿಹಾರ, ನಿತೀಶ್‌ ಹಾಗೂ ಲಾಲು ಸರ್ಕಾರಗಳೂ ಮುಸ್ಲಿಂ ರಜೆಗಳನ್ನ ಹೆಚ್ಚು ಮಾಡಿ ಬೇಕಂತಲೇ ಹಿಂದೂ ರಜೆಗಳನ್ನ ಕಡಿತಗೊಳಿಸಿವೆ. ಬಿಹಾರವನ್ನ ಇಸ್ಲಾಮಿಕ್‌ ರಾಜ್ಯವೆಂದು ಘೋಷಣೆ ಮಾಡಲಿ. ಈ ರೀತಿ ಹಿಂದೂಗಳ ಮೇಲೆ ಆಕ್ರಮಣ ಮಾಡ್ತಿರೋದನ್ನ ನೋಡಿದರೆ ಮುಂದೆ ಅವರು ಮೊಹಮ್ಮದ್ ನಿತೀಶ್ ಮತ್ತು ಮೊಹಮ್ಮದ್ ಲಾಲು ಅಂತ ಬದಲಾಗುತ್ತಾರೆ ಅನಿಸುತ್ತೆ ಅಂತ ಬಿಜೆಪಿ ನಾಯಕರು ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply