ಅಕ್ರಮವಾಗಿ ಭಾರತ ಪ್ರವೇಶ: ಇಬ್ಬರು ಚೀನಾ ಪ್ರಜೆಗಳ ಬಂಧನ

masthmagaa.com:

ಬಿಹಾರದ ಚಂಪಾರಣ ಬಳಿ ಭಾರತ ಹಾಗೂ ನೇಪಾಳ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸೋಕೆ ಪ್ರಯತ್ನಿಸಿರುವ ಇಬ್ಬರು ಚೀನಾ ಪ್ರಜೆಗಳನ್ನ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರನ್ನ ಚೀನಾದ ಜಿಯಾಂಗ್‌ಕ್ಸಿ ನಿವಾಸಿಗಳಾದ ಜಾವೊ ಜಿಂಗ್‌ ಮತ್ತು ಎಫ್‌ಯು ಕಾಂಗ್ ಅಂತ ಗುರುತಿಸಲಾಗಿದ್ದು, ಇವರು ಯಾವುದೇ ದಾಖಲೆಗಳಿಲ್ಲದೆ ಗಡಿ ದಾಟುವಾಗ ಬಂಧಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಅವರ ಈ ನಡೆಯ ಹಿಂದಿನ ಉದ್ಧೇಶ ಏನು ಅನ್ನೋದ್ರ ಕುರಿತು ತನಿಖೆ ನಡೆಸಲಾಗ್ತಿದೆ. ವಿಚಾರಣೆ ವೇಳೆ ಈ ಇಬ್ಬರು ಚೀನಾ ಪ್ರಜೆಗಳ ವರ್ತನೆ ವಿಚಿತ್ರವಾಗಿ ಕಂಡು ಬಂದಿದ್ದು, ಸರಿಯಾಗಿ ಯಾವುದಕ್ಕೂ ಉತ್ತರಿಸುತ್ತಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಅಧಿಕಾರಿಗಳ ಪ್ರಕಾರ ಇವರಿಬ್ಬರು ಈ ಹಿಂದೆ ಜುಲೈ 2 ರಂದು ಕೂಡ ಇದೇ ರೀತಿ ಭಾರತಕ್ಕೆ ನುಸುಳುವಾಗ ಸಿಕ್ಕಿಬಿದ್ದಿದ್ದರು. ಆ ಸಮಯದಲ್ಲಿ ವೀಸಾಗಳೊಂದಿಗೆ ಭಾರತಕ್ಕೆ ಬರುವಂತೆ ಎಚ್ಚರಿಕೆ ನೀಡಿ ಬಿಡಲಾಗಿತ್ತು ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply