27 ವರ್ಷಗಳ ದಾಂಪತ್ಯ ಜೀವನಕ್ಕೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಗುಡ್​ಬೈ

masthmagaa.com:

ಅಮೆರಿಕದ ಬ್ಯುಸಿನೆಸ್ ಮ್ಯಾಗ್ನೆಟ್, ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ, ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್​ನ ಸಹ ಸಂಸ್ಥಾಪಕ, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರೋ ಬಿಲ್ ಗೇಟ್ಸ್ ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್ ಇಡಲು ಮುಂದಾಗಿದ್ದಾರೆ. ಅಂದ್ರೆ ಬಿಲ್​ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್​ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಅಮೆರಿಕದ ಸಿಯಾಟಲ್​ ನಗರದ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್​ಗೆ ಜಂಟಿಯಾಗಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಪಡೆಯಲು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಆದ್ರೆ ಇಬ್ಬರೂ ಬಿಡುಗಡೆ ಮಾಡಿರೋ ಹೇಳಿಕೆಯಲ್ಲಿ, ‘After a great deal of thought and a lot of work on our relationship, we have made the decision to end our marriage’ ಅಂತ ಹೇಳಿದ್ದಾರೆ. ಅಂದ್ರೆ ದೊಡ್ಡದೊಂದು ಯೋಚನೆ ಇಟ್ಟುಕೊಂಡು ಮತ್ತು ನಮ್ಮ ರಿಲೇಷನ್​ಶಿಪಗೆ ಸಂಬಂಧಿಸಿದಂತೆ ಸಾಕಷ್ಟು ವರ್ಕೌಟ್​​ ಮಾಡಿದ ಬಳಿಕ ದಾಂಪತ್ಯ ಜೀವನವನ್ನ ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ ಅಂತ ಹೇಳಿದ್ದಾರೆ. ಬಿಲ್​ ಗೇಟ್ಸ್​ ಸಹ ಸಂಸ್ಥಾಪಕರಾಗಿರೋ ಮೈಕ್ರೋಸಾಫ್ಟ್​ ಕಂಪನಿಯಲ್ಲಿ ಮೆಲಿಂಡಾ ಫ್ರೆಂಚ್ ಗೇಟ್ಸ್​ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇರಿಕೊಂಡ್ರು. ಅಲ್ಲಿ ಇಬ್ಬರು ಪರಿಚಯವಾಗಿ ಕೆಲ ವರ್ಷಗಳವರೆಗೆ ಡೇಟಿಂಗ್ ಮಾಡಿದ್ದ ಇಬ್ಬರು 1994ರಲ್ಲಿ ಮದ್ವೆಯಾದ್ರು. ಗೇಟ್ಸ್​ ದಂಪತಿಗೆ ಮೂವರು ಮಕ್ಕಳಿದ್ದಾರೆ. ಒಂದು ಗಂಡು, ಎರಡು ಹೆಣ್ಣು. ಬಳಿಕ 2000ನೇ ಇಸವಿಯಲ್ಲಿ ಬಿಲ್ ಮತ್ತು ಮೆಲಿಂಡಾ ತಮ್ಮದೇ ಹೆಸರಿನ ಚಾರಿಟೇಬಲ್ ಟ್ರಸ್ಟ್​ ಸ್ಥಾಪಿಸಿದ್ರು. ಇದರ ಕೇಂದ್ರ ಕಚೇರಿ ಸಿಯಾಟಲ್​ನಲ್ಲಿದೆ. ಗಂಡ-ಹೆಂಡತಿಯಾಗಿ ಮುಂದುವರಿಯೋಕೆ ಸಾಧ್ಯವಿಲ್ಲ ಅಂತ ಹೇಳಿರೋ ಇಬ್ಬರೂ ಕೂಡ, ತಾವು ಹುಟ್ಟುಹಾಕಿ ಬೆಳೆಸಿರೋ ಬಿಲ್ ಅಂಡ್​ ಮೆಲಿಂಡಾ ಗೇಟ್ಸ್ ಫೌಂಡೇಷನ್​ನಲ್ಲಿ ಒಟ್ಟಿಗೆ ಕೆಲಸ ಮಾಡೋದಾಗಿ ಹೇಳಿದ್ದಾರೆ. ಇದು ಜಗತ್ತಿನ ಅತಿದೊಡ್ಡ ಖಾಸಗಿ ಚಾರಿಟೇಬಲ್ ಟ್ರಸ್ಟ್​ಗಳಲ್ಲಿ ಒಂದು. ಬಡತನ ನಿರ್ಮೂಲನೆ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ಜಗತ್ತಿನಾದ್ಯಂತ ಬಿಲ್ ಅಂಡ್ ಮೆಲಿಂಡಾ ಗೇಟ್ಸ್​ ಫೌಂಡೇಷನ್ ಸಾವಿರಾರು ಕೋಟಿ ಹಣ ಖರ್ಚು ಮಾಡಿದೆ. ಕಳೆದೆರಡು ದಶಕದಲ್ಲಿ 50 ಬಿಲಿಯನ್​ ಡಾಲರ್​ಗೂ ಹೆಚ್ಚು ಖರ್ಚು ಮಾಡಿದೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು ಮೂರೂವರೆ ಲಕ್ಷ ಕೋಟಿ ರೂಪಾಯಿ. ಮಲೇರಿಯಾ, ಪೊಲಿಯೋ ನಿರ್ಮೂಲನೆ, ಚೈಲ್ಡ್ ನ್ಯೂಟ್ರಿಷನ್ ಮತ್ತು ಲಸಿಕೆ ವಿಚಾರದಲ್ಲಿ ಈ ಟ್ರಸ್ಟ್​ನ​ ಕೊಡುಗೆ ಅಪಾರ. ಕೊರೋನಾ ಪರಿಹಾರಕ್ಕೆ 1.75 ಬಿಲಿಯನ್ ಡಾಲರ್ ಮೀಸಲಿಡೋದಾಗಿ ಕಳೆದ ವರ್ಷವಷ್ಟೇ ಘೋಷಿಸಿತ್ತು. 2019ರಲ್ಲಿ ಇದರ ನಿವ್ವಳ ಆಸ್ತಿ ಸುಮಾರು 43.3 ಬಿಲಿಯನ್ ಡಾಲರ್ ಇತ್ತು. ಈ ಮೂಲಕ ಅಮೆರಿಕದ ಅತಿದೊಡ್ಡ ಖಾಸಗಿ ಚಾರಿಟೇಬಲ್ ಟ್ರಸ್ಟ್ ಎನಿಸಿಕೊಂಡಿದೆ. ಬಿಲ್ ಮತ್ತು ಮೆಲಿಂಡಾ ತಮ್ಮ ಆಸ್ತಿಯಲ್ಲಿ ಈ ಫೌಂಡೆಷನ್​ಗೆ 36 ಬಿಲಿಯನ್ ಡಾಲರ್ ಕೊಟ್ಟಿದ್ದಾರೆ. ಇನ್ನು ಮೆಲಿಂಡಾ ಬಗ್ಗೆ ಹೇಳ್ಬೇಕು ಅಂದ್ರೆ, ಅಮೆರಿಕದವರೇ ಆದ ಇವರು ಇತ್ತೀಚಿನ ದಿನಗಳಲ್ಲಿ ತಮ್ಮ ಹೆಸರಿನ ಜೊತೆ ಒರಿಜಿನಲ್ ಸರ್​ನೇಮ್ ಆದ ಫ್ರೆಂಚ್ ಅನ್ನೋದನ್ನ ಸೇರಿಸಿದ್ದರು. ಮೆಲಿಂಡಾ​ ಫ್ರೆಂಚ್ ಗೇಟ್ಸ್ ಅಂತ. 2015ರಲ್ಲಿ ಇವರು ಪಿವೋಟಲ್ ವೆಂಚರ್ಸ್​ ಅನ್ನೋ ಇನ್ವೆಸ್ಟ್​ಮೆಂಟ್ ಕಂಪನಿಯನ್ನ ಸ್ಥಾಪಿಸಿದ್ರು. 2019ರಲ್ಲಿ ‘ದಿ ಮೂಮೆಂಟ್ ಆಫ್​ ಲಿಫ್ಟ್’ ಅನ್ನೋ ಬುಕ್​ ಪಬ್ಲಿಷ್ ಮಾಡಿದ್ರು. ಈಗ ಇಬ್ರು ಡಿವೋರ್ಸ್​ ಪಡೀತಿರೋದ್ರಿಂದ ಆಸ್ತಿಯಲ್ಲಿ ಪಾಲಾಗಬೇಕು. ಆಸ್ತಿಯನ್ನ ಹೇಗೆ ಪಾಲು ಮಾಡ್ಕೋಬೇಕು ಅನ್ನೋ ಬಗ್ಗೆ ನಾವಿಬ್ಬರು ಒಪ್ಪಂದಕ್ಕೆ ಬಂದಿದ್ದೇವೆ ಅಂತ ಕೋರ್ಟ್​ಗೆ ಸಲ್ಲಿಸಿರೋ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಹೇಗೆ, ಎಷ್ಟು ಆಸ್ತಿ ಅನ್ನೋದನ್ನ ಸ್ಪಷ್ಟವಾಗಿ ಹೇಳಿಲ್ಲ. ವಿಶ್ವದ ನಂಬರ್ ಒನ್ ಶ್ರೀಮಂತ ಆಗಿರೋ ಅಮೆಜಾನ್​ ಸಂಸ್ಥಾಪಕ ಜೆಫ್ ಬೆಝೋಸ್​ ಮತ್ತು ಅವರ ಪತ್ನಿ ಮೆಕೆನ್ಝಿ ಸ್ಕಾಟ್ 2019ರಲ್ಲಿ​ ಡಿವೋರ್ಸ್ ಪಡೆದಿದ್ದರು.

-masthmagaa.com:

Contact Us for Advertisement

Leave a Reply