ಬಿಲ್‌ ಗೇಟ್ಸ್‌-ಜಿನ್‌ಪಿಂಗ್‌ ಭೇಟಿ!

masthmagaa.com:

ಚೀನಾ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಇಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ರನ್ನ ಮೀಟ್‌ ಆಗಿದ್ದಾರೆ. ಈ ವೇಳೆ ಬಿಲ್‌ ಗೇಟ್ಸ್‌ ಅವ್ರನ್ನ ಜಿನ್‌ಪಿಂಗ್‌ ಅಮೆರಿಕದ ಗೆಳೆಯ ಅಂತ ಕರೆದಿದ್ದಾರೆ. ಈ ವರ್ಷದಲ್ಲಿ ಮೀಟ್‌ ಆಗಿರೋ ಮೊದಲ ಅಮೆರಿಕನ್‌ ಫೆಂಡ್‌ ನೀವೇ ಅಂತ ಗೇಟ್ಸ್‌ಗೆ ಜಿನ್‌ಪಿಂಗ್‌ ಹೇಳಿದ್ದಾರೆ. ಜೊತೆಗೆ ಚೀನಾದ ಡೆವಲಪ್‌ಮೆಂಟ್‌ ವರ್ಕ್‌ನಲ್ಲಿ ನೀವು ತುಂಬಾ ಒಳ್ಳೆಯ ಕೊಡುಗೆಯನ್ನ ನೀಡಿದ್ದಾರೆ. ನೀವು ನಮ್ಮ ಹಳೆಯ ಗೆಳೆಯ ಅಂತ ಬಿಲ್‌ ಗೇಟ್ಸ್‌ರನ್ನ ಹೊಗಳಿದ್ದಾರೆ. ಇನ್ನು ನಿನ್ನೆ ಚೀನಾಕ್ಕೆ ಲ್ಯಾಂಡ್ ಆಗಿರುವ ಬಿಲ್‌ ಗೇಟ್ಸ್‌, ಮಲೇರಿಯಾ ಹಾಗೂ ಟ್ಯುಬರ್‌ಕುಲೋಸಿಸ್‌ ರೋಗದ ವಿರುದ್ಧದ ಪ್ರಯತ್ನಗಳಿಗೆ ಚೀನಾಕ್ಕೆ 50 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 410 ಕೋಟಿ ರೂಪಾಯಿ ನೀಡೋದಾಗಿ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply