ಪೇಂಟ್ ಬಿಸಿನೆಸ್‌ಗೆ ಬಿರ್ಲಾ ಎಂಟ್ರಿ: ಇಂಡಸ್ಟ್ರಿ ಲೀಡ್‌ ಮಾಡೋಕ್‌ ಪ್ಲಾನ್!

masthmagaa.com:

ಆದಿತ್ಯ ಬಿರ್ಲಾ ಗ್ರೂಪ್ಸ್‌ ಕಂಪನಿ ಈಗ ಪೇಂಯ್ಟ್‌ ಮಾರ್ಕೆಟ್ಟಿಗೆ ಕಾಲಿಟ್ಟಿದೆ. ಕಂಪನಿ ಚೇರ್‌ಪರ್ಸನ್‌ ಕೆಎಂ ಬಿರ್ಲಾ ತಮ್ಮ ಹೊಸ ಪೇಂಯ್ಟ್‌ ಕಂಪನಿ ಬಿರ್ಲಾ ಓಪಸ್‌ನ್ನ ಲಾಂಚ್‌ ಮಾಡಿದ್ದಾರೆ. ತಮ್ಮ ಗ್ರಾಸಿಂ ಇಂಡಸ್ಟ್ರೀಸ್‌ ಅಡಿಯಲ್ಲಿ ಈ ಕಂಪನಿಯನ್ನ ಲಾಂಚ್‌ ಮಾಡಿದ್ದಾರೆ. ಈ ಮೂಲಕ ದೇಶದ ಜಿಡಿಪಿಗೆ 9% ಕೊಡುಗೆ ನೀಡೋ ಕನ್ಸ್ಟಕ್ಷನ್‌ ಸೆಕ್ಟರ್‌ಗೆ ತಮ್ಮ ಇನ್ನೊಂದು ಪ್ರಾಡಕ್ಟನ್ನ ಬಿರ್ಲಾ ಗ್ರೂಪ್ಸ್‌ ತಂದಿದೆ. ದೇಶದಲ್ಲಿ ಹೆಚ್ಚಾಗ್ತಿರೋ ಜನಸಂಖ್ಯೆ, ಬೂಮ್‌ ಆಗ್ತಿರೋ ರಿಯಲ್‌ ಎಸ್ಟೇಟ್‌ ಹಾಗೂ ತಲಾ ಆದಾಯದ ಸುಧಾರಣೆಗಳಿಂದ ಪೇಂಯ್ಟ್‌ ಬಳಕೆಯೂ ಜಾಸ್ತಿಯಾಗ್ತಿದೆ ಅಂತ ಕೆಎಂ ಬಿರ್ಲಾ ಹೇಳಿದ್ದಾರೆ.‌ ಅಲ್ಲದೆ ಜಾಗತಿಕ ಪೇಂಟ್‌ ಬಳಕೆಯ ಪರ್‌ ಕ್ಯಾಪಿಟಾ 10 ಕೆಜಿ ಇದೆ. ಆದ್ರೆ ಭಾರತದಲ್ಲಿ 3.5ಕೆಜಿ ಅಷ್ಟೇ ಇದೆ ಅಂದಿದ್ದಾರೆ. ಅಲ್ಲದೆ ಮೂರು ವರ್ಷಗಳಲ್ಲಿ ಗ್ರಾಸಿಂ ಪೇಂಯ್ಟ್ಸ್ ₹10 ಸಾವಿರ ಕೋಟಿ ಮೌಲ್ಯದ ವ್ಯಾಪಾರ ನಡೆಸೋ ಸ್ಥಿತಿಗೆ ತಲಪೋ ನಿರೀಕ್ಷೆ ಇದೆ. ದೇಶಾದ್ಯಂತ ಒಟ್ಟು 120 ಡಿಪೋಗಳನ್ನ ತೆರೆತಲಾಗತ್ತೆ ಅಂದಿದ್ದಾರೆ. ಒಟ್ಟಿನಲ್ಲಿ ಪೇಂಯ್ಟ್‌‌ ಸೆಕ್ಟರ್‌ನಲ್ಲಿ ಲೀಡ್‌ ಮಾಡ್ತಿರೋ ಏಷ್ಯನ್‌ ಪೇಂಯ್ಟ್ಸ್‌ಗೆ ಕಾಂಪಿಟೇಶನ್‌ ಕೊಡೋಕೆ ಬಿರ್ಲಾ ಗ್ರೂಪ್ಸ್‌ ಸಜ್ಜಾಗಿದೆ. ಈಗಾಗ್ಲೆ ಕಂಪನಿ 3 ಲಕ್ಷಕ್ಕೂ ಹೆಚ್ಚು ಪೇಂಯ್ಟ್‌ರ್‌ಗಳು ಹಾಗೂ ಕಾಂಟ್ರಾಕ್ಟರ್‌ಗಳನ್ನ ಎನ್‌ರೋಲ್‌ ಮಾಡ್ಕೊಂಡಿದೆ.

-masthmagaa.com

Contact Us for Advertisement

Leave a Reply