ಬರ್ತ್‌ಡೇ ಬಾಯ್‌ ರಕ್ಷಿತ್‌ ಶೆಟ್ಟಿ ಹುಟ್ಟುಹಬ್ಬಕ್ಕೆ ಬಂತು ಬಿಗ್‌ ಅಪ್‌ಡೇಟ್‌!

masthmagaa.com:

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೋಲ್ತಾ ಇದಾರೆ. ಹುಟ್ಟುಹಬ್ಬದ ದಿನವೇ ತಮ್ಮ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್‌ ಕೊಟ್ಟಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಎಂಬ ರಕ್ಷಿತ್‌ ಅವರ ಮುಂದಿನ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ ಒಂದನ್ನ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಚಾರ್ಲಿ ಸಿನಿಮಾದ ಮೂಲಕ ಜನಮನ ಗೆದ್ದಿದ್ದ ರಕ್ಷಿತ್‌ ಶೆಟ್ಟಿ ಮತ್ತೊಂದು ಸಿನಿಮಾದ ಮೂಲಕ ಹಿಸ್ಟರಿ ಕ್ರೀಯೆಟ್‌ ಮಾಡೋಕೆ ಹೊರಟಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಡಬಲ್‌ ಶೇಡ್‌ನಲ್ಲಿ ಸಿಂಪಲ್‌ ಸ್ಟಾರ್‌ ಕಾಣಿಸಕೊಳ್ಳಲಿದ್ದಾರೆ. ಒಂದು ಲುಕ್‌ ಸ್ವಲ್ಪ ಫಾರ್ಮಲ್‌, ಲವರ್‌ ಬಾಯ್‌ ತರ ಇದ್ರೆ ಅಂತ ಅನಿಸಿದ್ರೆ ಇನ್ನೊಂದು ಲುಕ್‌ ಸ್ವಲ್ಪ ರಗಡ್‌ ಲುಕ್‌ ಅಲ್ಲಿ ಕಾಣಿಸಿದ್ದಾರೆ. ‘ನಿಮ್ಮ ಮನು ಇಂದು ವಿಶೇಷ ಪ್ರಕಟಣೆಯೊಂದಿಗೆ ಬಂದಿದ್ದಾನೆ. ಸಮಯ, ಪ್ರೀತಿ ಮತ್ತು ಕನಸುಗಳ SSE ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ತರಲಾಗುತ್ತಿದೆ. ಸೈಡ್ ಎ ಮತ್ತು ಸೈಡ್ ಬಿ. ಚಿತ್ರದ ಚಿತ್ರೀಕರಣ ಮುಗಿದಿದೆ. ಎರಡೂ ಪಾರ್ಟ್​​ಗಳ ಬಿಡುಗಡೆ ದಿನಾಂಕವನ್ನು ಜೂನ್ 15 ರಂದು ಪ್ರಕಟಿಸಲಾಗುವುದು’ ಅಂತ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply