ಕೇಜ್ರಿವಾಲ್‌ ಬಂಧನಕ್ಕೆ ವಿಪಕ್ಷಗಳ ಆಕ್ರೋಶ: ಅ‍ಣ್ಣಾ, ಬಿಜೆಪಿಯಿಂದ ಟಾಂಗ್!

masthmagaa.com:

ಮದ್ಯ ಹಗರಣ ಕೇಸ್‌ನಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರನ್ನ ED ಅಧಿಕಾರಿಗಳ ಬಂಧಿಸಿರೊ ವಿಚಾರ ದಿಲ್ಲಿ ಅಷ್ಟೇ ಅಲ್ಲ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ED ಅಧಿಕಾರಿಗಳ ಕ್ರಮ ಪ್ರಶ್ನಿಸಿ ಕೇಜ್ರಿವಾಲ್‌ ಸುಪ್ರಿಂಕೋರ್ಟ್‌ ಮೊರೆ ಹೋಗಿದ್ರು. ಆದ್ರೆ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೀತಿದ್ದಿದ್ರಿಂದ ಅರ್ಜಿಯನ್ನ ವಾಪಸ್‌ ತಗೊಂಡಿದ್ದಾರೆ. ಇನ್ನು ಕೇಜ್ರಿವಾಲ್‌ ಅವ್ರನ್ನ ಬಂಧಿಸಿದ್ದ ED ಅವ್ರನ್ನ ರೌಸ್‌ ಅವೆನ್ಯೂನ ಜಿಲ್ಲಾ ನ್ಯಾಯಾಲಯಕ್ಕೆ ಪ್ರೊಡ್ಯೂಸ್‌ ಮಾಡಿದೆ. ಅಲ್ಲದೇ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್‌ ಮುಖ್ಯ ಆರೋಪಿ, ಹೀಗಾಗಿ 10 ದಿನಗಳ ಕಸ್ಟಡಿಗೆ ಕೊಡಿ ಅಂತ ಕೇಳಿದೆ.

ಈ ವೇಳೆ ಕೇಜ್ರಿವಾಲ್‌ ಮಾತನಾಡಿ, “ನಾನು ಒಳಗಿದ್ರು, ಹೊರಗಿದ್ರು, ನನ್ನ ಜೀವನ ದೇಶಕ್ಕಾಗಿ ಮುಡಿಪಾಗಿದೆ” ಅಂತ ಹೇಳಿದ್ದಾರೆ. ಇನ್ನು ಕೇಜ್ರಿವಾಲ್‌ರ ಬಂಧನ ಖಂಡಿಸಿ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಅದ್ರಲ್ಲೂ ಪ್ರಮುಖವಾಗಿ ಆಪ್ ನಾಯಕರು, ಬೆಂಬಲಿಗರು ದಿಲ್ಲಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೋಲಿಸರು ಆಪ್‌ ಸರ್ಕಾರದ ಇಬ್ಬರು ಮಂತ್ರಿಗಳನ್ನ ಅರೆಸ್ಟ್‌ ಮಾಡಿದ್ದಾರೆ.‌ ಇನ್ನು ಅತ್ತ ಕೇರಳದಲ್ಲಿ ಈ ವಿಚಾರವಾಗಿ ಆಡಳಿತರೂಢ CPI(M) ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ಅವ್ರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೇಜ್ರಿವಾಲ್‌ ಬಂಧನ ವಿಚಾರವಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರಿಯಾಕ್ಟ್‌ ಮಾಡಿದ್ದಾರೆ. ಕೇಜ್ರಿವಾಲ್‌ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ʻಒಂದು ಕಾಲದಲ್ಲಿ ಮದ್ಯದ ವಿರುದ್ದ ನನ್ನ ಜೊತೆ ಹೋರಾಟ ಮಾಡಿದ್ದ ಕೇಜ್ರಿವಾಲ್‌ ಈಗ ಮದ್ಯ ಹಗರಣದಲ್ಲಿ ತಾನೇ ಅರೆಸ್ಟ್‌ ಆಗಿದ್ದಾರೆ. ಸ್ವಯಂಕೃತ್ಯದಿಂದಾಗಿ ಕೇಜ್ರಿವಾಲ್‌ ಅವ್ರ ಬಂಧನವಾಗಿದೆ. ನನಗೂ ಈ ಬಂಧನದಿಂದ ಬೇಸರ ಆಗಿದೆ. ಆದ್ರೆ ಕಾನೂನಿನ ಪ್ರಕಾರ ಏನಾಗುತ್ತೋ ಅದೂ ಆಗ್ಲೇ ಬೇಕುʼ ಅಂತೇಳಿದ್ದಾರೆ. ಅತ್ತ ಇಂಡಿಯಾ ಮೈತ್ರಿಕೂಟದ ನಾಯಕರು ಕೇಜ್ರಿವಾಲ್‌ರ ಬಂಧನದ ಕ್ರಮ ಖಂಡಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಇದೆಲ್ಲದ್ರ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಜ್ರಿವಾಲ್‌ ಬಂಧನದ ವಿಚಾರವಾಗಿ ಕಾನೂನು ಸಹಾಯ ನೀಡೊ ಬಗ್ಗೆ ಕೇಜ್ರಿವಾಲ್‌ ಅಥ್ವಾ ಅವ್ರ ಕುಟುಂಬವನ್ನ ಸಂಪರ್ಕಿಸಿ ಮಾತುಕತೆ ನಡೆಸಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಮತ್ತೊಂದ್‌ ಕಡೆ ಕೇಜ್ರಿವಾಲ್‌ ಅವ್ರನ್ನ ದಿಲ್ಲಿ ಸಿಎಂ ಸ್ಥಾನದಿಂದ ತೆಗೆದು ಹಾಕ್ಬೇಕು ಅಂತ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಇನ್ನು ಇದೇ ಮದ್ಯ ಹಗರಣ ಕೇಸ್‌ನಲ್ಲಿ ಸದ್ಯ ED ಅಧಿಕಾರಿಗಳ ಬಂಧನದಲ್ಲಿರೊ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಪುತ್ರಿ ಕೆ. ಕವಿತಾ ಅವ್ರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿದೆ. ಅಲ್ದೇ ಈ ಕೇಸ್‌ ವಿಚಾರವಾಗಿ ಕವಿತಾ ಅವ್ರಿಗೆ ಅಪೇಕ್ಸ್‌ ಕೋರ್ಟ್‌ಗೆ ಸಂಪರ್ಕಿಸಿ ಅಂತೇಳಿದೆ.

-masthmagaa.com

Contact Us for Advertisement

Leave a Reply