ಬಿಜೆಪಿ ಕಾರ್ಪೊರೇಟರ್ ಕುಟುಂಬದ ಬರ್ಬರ ಕೊಲೆ

ಬಿಜೆಪಿ ಕಾರ್ಪೊರೇಟರ್ ಮತ್ತವರ ಕುಟುಂಬದ ನಾಲ್ವರನ್ನು ಗುಂಡಿಟ್ಟು ಕೊಲೆಗೈದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಿನ್ನೆ ಬಿಜೆಪಿ ಕಾರ್ಪೊರೇಟರ್ 55 ವರ್ಷದ ರವೀಂದ್ರ ಖಾರತ್ ಜಲಗಾಂವ್ ಜಿಲ್ಲೆಯ ತಮ್ಮ ಮನೆಯಲ್ಲಿದ್ದರು. ಈ ವೇಳೆ ನಾಡಪಿಸ್ತೂಲ್ ಮತ್ತು ಚಾಕು ಹಿಡಿದ ಮೂವರು ದುಷ್ಟರು ಬಿಜೆಪಿ ನಾಯಕನ ಮನೆಗೆ ಆಗಮಿಸಿ, ಗುಂಡಿನ ದಾಳಿ ನಡೆಸಿದ್ದಾರೆ.

ಹೀಗೆ ಗುಂಡಿನ ಮಳೆಗರೆದು ಬಿಜೆಪಿ ಕಾರ್ಪೊರೇಟರ್ ಕುಟುಂಬವನ್ನು ಮುಗಿಸಿದ ಬಳಿಕ ತಾವೇ ಪೊಲೀಸರ ಬಳಿ ಶರಣಾಗಿದ್ದಾರೆ. ಬಂಧಿತರಿಂದ ಪೊಲೀಸರು ಪಿಸ್ತೂಲ್ ಮತ್ತು ಚಾಕು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿಗೆ ತುತ್ತಾಗಿದ್ದ ಐವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಬಜಾರ್ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಹತ್ಯೆಗೆ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ.

Contact Us for Advertisement

Leave a Reply