ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಎಂದು ಒತ್ತಾಯಿಸಿದ ಬಿಜೆಪಿ!

masthmagaa.com:

ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳೇ ಜಾಸ್ತಿ. ಹೀಗಾಗಿ ಖಾಸಗಿ ಬಸ್‌ಗಳಲ್ಲಿ ಸಂಚರಿಸೋ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಅಂತ ಕಟೀಲ್‌ ಒತ್ತಾಯಿಸಿದ್ದಾರೆ. ಇದೇ ವೇಳೆ ಈ ಸರ್ಕಾರ ಬಂದ ಬಳಿಕ ಮೂರು ಕೊಡುಗೆಗಳನ್ನ ನೀಡಿದೆ. ಇಂಧನ ಇಲಾಖೆ ನೌಕರರಿಗೆ ಏಟಿನ ಭಾಗ್ಯ. ಮನೆಯ ಯಜಮಾನಿ ಯಾರು ಅನ್ನೋ ವಿಚಾರಕ್ಕೆ ಅತ್ತೆ ಸೊಸೆ ನಡುವೆ ಜಗಳ ಭಾಗ್ಯ ಹಾಗೂ ಸಾರ್ವಜನಿಕರಿಗೆ ಕಾಯುವ ಭಾಗ್ಯ ಸಿಕ್ಕಿವೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ತಪ್ಪು ಧೋರಣೆಯಿಂದ ಇಷ್ಟು ದಿನ ಇಂಧನ ಇಲಾಖೆ ನೌಕರರು ಏಟು ತಿನ್ನುತ್ತಿದ್ದರು. ಇನ್ನು ಮುಂದೆ ಸಾರಿಗೆ ಇಲಾಖೆ ಹಾಗೂ ಬ್ಯಾಂಕ್‌ ಸಿಬ್ಬಂದಿ ಏಟು ತಿನ್ನಲಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply