ವೀರ ಸಾವರ್ಕರ್​​​ಗೆ ಭಾರತ ರತ್ನ..! ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಮಹಾರಾಷ್ಟ್ರವನ್ನು ಬರಗಾಲ ಮುಕ್ತ ಮಾಡಿ, 5 ವರ್ಷಗಳಲ್ಲಿ 1 ಕೋಟಿ ಮಂದಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.

ಇನ್ನು ತಮ್ಮ ಪ್ರಣಾಳಿಕೆಯಲ್ಲಿ ವೀರ ಸಾವರ್ಕರ್​​ಗೆ ಭಾರತ ರತ್ನ ಕೊಡಿಸುವ ಭರವಸೆಯನ್ನು ಕೊಟ್ಟಿದೆ. ಜೊತೆಗೆ ಸಾವಿತ್ರಿ ಭಾಯ್ ಫುಲೆ ಮತ್ತು ಜ್ಯೋತಿ ರಾವ್ ಫುಲೆಯವರಿಗೂ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡುತ್ತೇವೆ ಎಂದಿದೆ.

ಜೊತೆಗೆ ಮುಂಬರುವ 5 ವರ್ಷಗಳಲ್ಲಿ ಕೃಷಿಗೆ ನೀರು ಮತ್ತು ವಿದ್ಯುತ್ ಸೌಲಭ್ಯವನ್ನೂ ಕಲ್ಪಿಸೋದಾಗಿ ಬಿಜೆಪಿ ಹೇಳಿದೆ. 16 ಪಾಯಿಂಟ್ಸ್ ಇರುವ ಈ ಸಂಕಲ್ಪ ಪತ್ರವನ್ನು ದೇವೇಂದ್ರ ಫಡ್ನಾವಿಸ್ ಬಿಡುಗಡೆ ಮಾಡಿದ್ರು.

3 ದಿನಗಳ ಹಿಂದಷ್ಟೇ ಬಿಜೆಪಿಯ ಮೈತ್ರಿ ಪಕ್ಷ ಶಿವಸೇನೆ ಕೂಡ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು.  ಅದರಲ್ಲಿ 10 ರೂಪಾಯಿಗೆ ಫುಲ್ ಊಟ ಮತ್ತು ರೈತರನ್ನು ಋಣಮುಕ್ತ ಮಾಡುವ ಭರವಸೆ ನೀಡಲಾಗಿತ್ತು.

ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಹೊರಬೀಳಲಿದೆ.

Contact Us for Advertisement

Leave a Reply