ಹಿಂದೂಗಳು ಬಂಗಾಳ ಬಿಡಬೇಕೆಂದಿಲ್ಲ: ಅಮಿತ್ ಶಾ

ಕೇಂದ್ರ ಗೃಹಸಚಿವ ಅಮಿತ್ ಶಾ ಇವತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಎನ್‍ಆರ್‍ಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಇದೇ ವೇಳೆ ಮಾತನಾಡಿದ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ನೇ ವಿಧಿ ರದ್ದತಿ ಕೂಗು ಪಶ್ಚಿಮ ಬಂಗಾಳದಲ್ಲೇ ಹುಟ್ಟಿತ್ತು. ಶ್ಯಾಮ್ ಪ್ರಸಾದ್ ಮುಖರ್ಜಿ ಇಲ್ಲಿಂದಲೇ ಒಂದು ದೇಶ, ಒಂದೇ ಸಂವಿಧಾನ ಕಹಳೆ ಮೊಳಗಿಸಿದ್ದರು ಅಂದ್ರು.

ಇದೇ ವೇಳೆ ಎನ್‍ಆರ್‍ಸಿ ಬಗ್ಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾವು ಎನ್‍ಆರ್‍ಸಿ ಜಾರಿಗೆ ತರುತ್ತೇವೆ. ಅದರಂತೆ ಭಾರತದಲ್ಲಿ ಒಬ್ಬರೇ ಒಬ್ಬರು ಅಕ್ರಮ ವಲಸಿಗರು ನೆಲೆಸಲು ಬಿಡಲ್ಲ. ವಲಸಿಗರನ್ನು ಹುಡುಕಿ ಹುಡುಕಿ ಹೊರಗಟ್ಟುತ್ತೇವೆ. ಆದ್ರೆ ಹಿಂದೂ, ಸಿಖ್, ಬೌದ್ಧ, ಜೈನ, ಇಸಾಯಿ ಧರ್ಮದ ವಲಸಿಗರು ಬಂಗಾಳವನ್ನು ಬಿಡಬೇಕಾದ ಅಗತ್ಯವಿಲ್ಲ. ಇವರಿಗೆಲ್ಲಾ ಶಾಶ್ವತವಾಗಿ ಭಾರತದ ನಾಗರಿಕತ್ವ ನೀಡಲಾಗುತ್ತೆ ಅಂತ ಹೇಳಿದ್ದಾರೆ.

ಶ್ಯಾಮ್ ಪ್ರಸಾದ್ ಮುಖರ್ಜಿಯವರ ನಿಧನ ನಂತರ ಇದೆಲ್ಲಾ ಇಲ್ಲಿಗೆ ನಿಲ್ಲುತ್ತೆ ಎಂದು ಕಾಂಗ್ರೆಸ್‍ನವರು ಭಾವಿಸಿದ್ದರು. ಆದ್ರೆ ನಾವು ಬಿಜೆಪಿಯವರು ಹಿಡಿದ ಕೆಲಸವನ್ನು ಅಷ್ಟು ಸುಲಭಕ್ಕೆ ಬಿಡೋದಿಲ್ಲ ಅಂದ್ರು.

Contact Us for Advertisement

Leave a Reply