5 ಕೋಟಿ ಮಾನನಷ್ಟ ಪರಿಹಾರ ನೀಡುವಂತೆ ಮಾಜಿ ಸಿಎಂಗೆ ನೋಟಿಸ್!

masthmagaa.com:

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅಳಿಯ ಸಮೀರ್ ಖಾನ್​ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್​​ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ದೇವೇಂದ್ರ ಫಡ್ನಾವಿಸ್​​ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಮಾನಹಾನಿ ಮಾಡಿದ್ದಾರೆ. ಇದ್ರಿಂದ ನನಗೆ ಮಾನಸಿಕ ಹಿಂಸೆ, ಸಂಕಟದ ಜೊತೆಗೆ ಹಣಕಾಸಿನ ನಷ್ಟವಾಗಿದೆ. ಹೀಗಾಗಿ ನನಗೆ 5 ಕೋಟಿ ರೂಪಾಯಿ ನೀಡಬೇಕು ಅಂತ ಲೀಗಲ್ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. ಅಂದಹಾಗೆ ನವೆಂಬರ್ 1ರಂದು ಮಾತಾಡಿದ್ದ ಫಡ್ನಾವಿಸ್​, ಸಮೀರ್ ವಿರುದ್ಧ ತನಿಖೆ ನಡೆಯುತ್ತಿರುವ ಹೊತ್ತಲ್ಲೂ ಆತನ ಬಳಿ ಮಾದಕ ವಸ್ತು ಇದೆ ಅಂತ ಆರೋಪಿಸಿದ್ರು. ಮಾದಕ ದವ್ರಗಳ ವ್ಯವಹಾರ ಸಂಬಂಧ ಸಮೀರ್​ ಖಾನ್​​ರನ್ನು ಜನವರಿ 13ರಂದು ಎನ್​ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ರು. ಸೆಪ್ಟೆಂಬರ್​ 27ರಂದು ಜಾಮೀನು ಸಿಕ್ಕಿತ್ತು.

ಮತ್ತೊಂದ್ಕಡೆ ಸಚಿವ ನವಾಬ್ ಮಲ್ಲಿಕ್ ನಮ್ಮ ಕುಟುಂಬದ ಇಮೇಜ್​​ಗೆ ಧಕ್ಕೆಯಾಗುವಂತೆ ಟ್ವೀಟ್ ಮಾಡಿದ್ದಾರೆ ಅಂತ ಆರೋಪಿಸಿ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಪತ್ನಿ ಅಮೃತಾ ಫಡ್ನಾವಿಸ್ ನೋಟಿಸ್ ಕಳುಹಿಸಿದ್ದಾರೆ.

-masthmagaa.com

Contact Us for Advertisement

Leave a Reply