ಈಗ ಶುರುವಾಗಿದೆ ಭಯಾನಕ ಪ್ಲೇಗ್!

masthmagaa.com:

ಕೊರೋನಾ ಮಹಾಮಾರಿಯ ನಡುವೆಯೇ ಮತ್ತೊಂದು ಭಯಾನಕ ಕಾಯಿಲೆ ಹಾವಳಿ ಶುರು ಮಾಡೋ ಮುನ್ಸೂಚನೆ ಕೊಟ್ಟಿದೆ. ಆಫ್ರಿಕಾದ ಕಾಂಗೋದಲ್ಲಿ ಬ್ಯುಬೋನಿಕ್ ಪ್ಲೇಗ್ ಕಾಟ ಶುರುವಾಗಿದೆ. ಇದನ್ನು ಬ್ಲಾಕ್ ಡೆತ್ ಅಂತಲೂ ಕರೆಯಲಾಗುತ್ತೆ. ಈಗಾಗಲೇ ಇಲ್ಲಿನ ಇತುರಿ ಪ್ರಾಂತ್ಯದಲ್ಲಿ 15 ಮಂದಿಯಲ್ಲಿ ಈ ಮಹಾಮಾರಿ ಕಾಣಿಸಿಕೊಂಡಿದೆ. ಏಪ್ರಿಲ್ 23ರಿಂದ ಮೇ 8ರವರೆಗೆ 11 ಮಂದಿ ಜೀವ ಕೂಡ ಬಿಟ್ಟಿದ್ದಾರೆ. ಮೃತರೆಲ್ಲರೂ ಮೊದಲು ರಕ್ತವಾಂತಿ ಮಾಡಿಕೊಂಡಿದ್ದು, ನಂತರ ಜೀವ ಬಿಟ್ಟಿದ್ದಾರೆ. ಈ ಕಾಯಿಲೆ ಬಂದವರಲ್ಲಿ ಆರಂಭದಲ್ಲಿ ತಲೆ ನೋವು, ಜ್ವರ, ಸೀನು ಬರೋದು, ರಕ್ತವಾಂತಿ ಲಕ್ಷಣ ಪ್ರಮುಖವಾಗಿವೆ ಅಂತ ತಜ್ಞರು ತಿಳಿಸಿದ್ದಾರೆ. ಮೊದಲು ಮಹಿಳೆಯೊಬ್ಬರು ಸಾವನ್ನಪ್ಪಿದ್ರು. ನಂತರ ಅದೇ ಪ್ರದೇಶದ ಮತ್ತೂ ನಾಲ್ವರಲ್ಲಿ ಈ ಮಹಾಮಾರಿ ಕಾಣಿಸಿಕೊಂಡು, ಆಮೇಲೆ ಜೀವ ಬಿಟ್ಟಿದ್ದಾರೆ. ಇವರ ಅಂತ್ಯಕ್ರಿಯೆಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಜೀವ ಬಿಟ್ಟಿದ್ದಾರೆ. ಹೀಗೇ ಈ ಮಹಾಮಾರಿ ದಿನೇ ದಿನೇ ಜಾಸ್ತಿಯಾಗ್ತಿದೆ. ಸದ್ಯ ಜನರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಶವಗಳಿಂದ ದೂರ ಇರುವಂತೆ ಸೂಚಿಸಲಾಗಿದೆ. ಅಂದಹಾಗೆ ಕಳೆದ ವರ್ಷ ಕೂಡ ಇದೇ ಇತುರಿಯಲ್ಲಿ 461 ಮಂದಿಯಲ್ಲಿ ಈ ಪ್ಲೇಗ್ ಪತ್ತೆಯಾಗಿ, 31 ಮಂದಿ ಪ್ರಾಣ ಕಳೆದುಕೊಂಡಿದ್ರು. ಇಲಿಗಳಿಂದ ಮನುಷ್ಯರಿಗೆ ಹರಡೋ ಕಾಯಿಲೆ ಇದಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡೋ ಸಾಂಕ್ರಾಮಿಕ ಕಾಯಿಲೆಯಾಗಿದೆ. ಮಾರಣಾಂತಿಕ ಕೂಡ ಹೌದು..

ಈ ಹಿಂದೆ ಅಂದ್ರೆ 1347ರಲ್ಲಿ ಯೂರೋಪಿನಲ್ಲಿ ಬ್ಲಾಕ್‍ಡೆತ್ ಹಾವಳಿಗೆ ಜನ ಅಕ್ಷರಶಃ ನಲುಗಿ ಹೋಗಿದ್ರು. ಈ ಭಯಂಕರ ಪ್ಲೇಗ್‍ಗೆ 4 ವರ್ಷಗಳಲ್ಲಿ 20 ಕೋಟಿಯಷ್ಟು ಜನ ಜೀವ ಬಿಟ್ರು. ಯೂರೋಪ್​​ನಿಂದ ಹಲವು ದೇಶಗಳಿಗೆ ಹರಡಿತ್ತು ಈ ಮಹಾಮಾರಿ.. ರಸ್ತೆ ರಸ್ತೆಗಳ್ಲಲಿ ಹೆಣಗಳ ರಾಶಿ ಬಿದ್ದಿರ್ತಿತ್ತು. ಅಷ್ಟರ ಮಟ್ಟಿಗೆ ಇತ್ತು ಬ್ಲಾಕ್ ಡೆತ್ ಹಾವಳಿ.. ಔಷಧಿ ಇಲ್ಲ ಏನ್ ಇಲ್ಲ.. ಏನ್ ಮಾಡ್ಬೇಕಂತಾನೇ ಗೊತ್ತಾಗ್ತಿರಲಿಲ್ಲ. ಆಗ ಇಟಲಿಯ ವೆನೆಟಿಯನ್ ಅನ್ನೋ ಬಂದರಿನಲ್ಲಿ, ಹೊರಗಿನಿಂದ ಬಂದ ನಾವಿಕರನ್ನು ಒಂದಷ್ಟು ದಿನ ಪ್ರತ್ಯೇಕವಾಗಿ ಇರಿಸಿ, ಅವರಿಗೆ ಕಾಯಿಲೆ ಇದ್ಯೋ ಇಲ್ವೋ ಅಂತ ಚೆಕ್ ಮಾಡೋಕೆ ಶುರು ಮಾಡಿದ್ರು. ಮೊದಲಿಗೆ ನಾವಿಕರನ್ನು 30 ದಿನಗಳ ಕಾಲ ಹಡಗಿನಲ್ಲೇ ಇರಿಸಲಾಗುತ್ತಿತ್ತು. ಇದನ್ನು ವೆನೆಟಿಯನ್ ಲಾ ಅಂತಲೇ ಕರೆಯಲಾಯ್ತು. ನಂತರ 30 ದಿನಗಳ ಈ ಅವಧಿಯನ್ನು 40 ದಿನಕ್ಕೆ ಏರಿಸಿ ಕ್ವಾರಂಟೈನ್ ಅಂತ ಕರೆಯಲಾಯ್ತು. ಈ ಮೂಲಕ ಕ್ವಾರಂಟೈನ್ ಅನ್ನೋ ಒಂದು ಪದ್ಧತಿ ವಿಶ್ವದಲ್ಲಿ ಅಸ್ತಿತ್ವಕ್ಕೆ ಬಂತು..

-masthmagaa.com

Contact Us for Advertisement

Leave a Reply