ಇರಾನ್‍ಗೆ ಸೇರಿದ ತೈಲ ಟ್ಯಾಂಕರ್ ಮೇಲೆ ಮಿಸೈಲ್ ದಾಳಿ..!

ಇರಾನ್‍ಗೆ ಸೇರಿದ ತೈಲ ಟ್ಯಾಂಕರ್ ಮೇಲೆ ಮಿಸೈಲ್ ದಾಳಿ ನಡೆದಿದೆ. ಸೌದಿ ಅರೇಬಿಯಾದ ಜೆಡ್ಡಾ ಬಂದರಿನಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್‍ಗೆ ಭಾರಿ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಟ್ಯಾಂಕರ್ ನಿಂದ ಜೆಡ್ಡಾ ಬಳಿ 60 ಮೈಲಿ ಉದ್ದಕ್ಕೂ ತೈಲ ಸೋರಿಕೆಯಾಗಿದೆ. ಗಲ್ಫ್ ಪ್ರದೇಶದ ಕೆಂಪು ಸಮುದ್ರದ ಬಳಿ ಈ ಘಟನೆ ನಡೆದಿದ್ದು, ಸೌದಿ ಮತ್ತು ಇರಾನ್ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಆದ್ರೆ ಸೌದಿ ಅರೇಬಿಯಾ ಕೂಡ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಆದ್ರೆ ಇರಾನ್ ಮಾಧ್ಯಮಗಳು ಇದು ಭಯೋತ್ಪಾದಕ ದಾಳಿಯಾಗಿದ್ದು, ಎರಡು ಟ್ಯಾಂಕರ್‍ಗಳಿಗೆ ಹಾನಿಯಾಗಿದೆ ಎಂದು ವರದಿ ಮಾಡಿವೆ. ಈ ಹಿಂದೆ ಸೌದಿಯ ತೈಲ ಘಟಕದ ಮೇಲೂ ಇದೇ ರೀತಿಯ ದಾಳಿ ನಡೆದಿತ್ತು. ಆಗ ಈ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕಾ ಆರೋಪಿಸಿತ್ತು. ಆದ್ರೆ ಇರಾನ್ ಮಾತ್ರ ಆರೋಪವನ್ನು ನಿರಾಕರಿಸಿತ್ತು. ಇನ್ನು ತೈಲ ಟ್ಯಾಂಕರ್ ಮೇಲೆ ದಾಳಿಯ ಬೆನ್ನಲ್ಲೇ ತೈಲ ಬೆಲೆಯಲ್ಲಿ ಶೇ.2ರಷ್ಟು ಏರಿಕೆಯಾಗಿದೆ.

Contact Us for Advertisement

Leave a Reply