ಗ್ಯಾಂಗ್‌ಸ್ಟಾರ್‌ ಅತೀಕ್‌ ಮನೆಯಲ್ಲಿ ಸಿಕ್ತು ರಕ್ತಸಿಕ್ತ ಚಾಕು!

masthmagaa.com:

ಗುಂಡೇಟಿಗೆ ಮೃತಪಟ್ಟ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಕಚೇರಿಯಲ್ಲಿ ರಕ್ತಸಿಕ್ತ ಚಾಕು ಹಾಗೂ ರಕ್ತದ ಕಲೆಗಳಿರುವ ಬಟ್ಟೆಗಳು ಪತ್ತೆಯಾಗಿವೆ. ಅತೀಕ್‌ ಹತ್ಯೆ ಬಳಿಕ ಆತನ ಕಚೇರಿಯಲ್ಲಿ ತನಿಖೆ ನಡೆಸಿದ ವೇಳೆ ಚಾಕು, ಹರಿದ ಸ್ಥಿತಿಯಲ್ಲಿದ್ದ ರಕ್ತಮಯ ಬಟ್ಟೆಗಳು ಪತ್ತೆಯಾಗಿದೆ. ಮತ್ತೊಂದು ಕೊಠಡಿಯಲ್ಲಿ ಒಡೆದ ಗಾಜಿನ ಬಳೆಗಳ ತುಂಡುಗಳು ಪತ್ತೆಯಾಗಿದ್ದು, ನೆಲದ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ರಕ್ತದ ಕಲೆಗಳು, ಚಾಕು ಅತೀಕ್ ಕಚೇರಿಯ ಮೆಟ್ಟಿಲುಗಳ ಬಳಿ ಮತ್ತು ಅಡುಗೆಮನೆಯ ಪಕ್ಕದಲ್ಲಿ ಕಂಡುಬಂದಿದೆ. ಈ ಕುರಿತು ಫಾರೆನ್ಸಿಕ್‌ ಸೈನ್ಸ್‌ ತಂಡವನ್ನ ಕರೆಸಿ ಸಂಪೂರ್ಣ ತನಿಖೆ ನಡೆಸಲಾಗುವುದು ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply