ಬಾಹ್ಯಾಕಾಶಕ್ಕೆ ಹಾರ್ತಿದ್ದಾನೆ 18ರ ಯುವಕ!

masthmagaa.com:

ಇತ್ತೀಚೆಗಷ್ಟೇ ವರ್ಜಿನ್ ಗೆಲಾಕ್ಟಿಕ್ ಸಂಸ್ಥೆಯ ರಿಚರ್ಡ್​ ಬ್ರಾನ್ಸನ್ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಅದೇ ರೀತಿ ಜುಲೈ 20ರಂದು ಬ್ಲೂ ಒರಿಜಿನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತವರ ಸಹೋದರ ಕೂಡ ನ್ಯೂ ಶೆಫರ್ಡ್​​ ರಾಕೆಟ್​​​ನಲ್ಲಿ ಬಾಹ್ಯಾಕಾಶಕ್ಕೆ ಹಾರ್ತಿದ್ದಾರೆ. ವಿಶೇಷ ಅಂದ್ರೆ ಅವರ ಜೊತೆ 18 ವರ್ಷದ ಯುವಕ ಕೂಡ ಜೊತೆ ನೀಡಲಿದ್ಧಾನೆ. ಒಲಿವರ್ ಡಾಯ್ಮನ್​ ಬಾಹ್ಯಾಕಾಶ ಪ್ರವಾಸಕ್ಕೆ ಮೊದಲ ಕಸ್ಟಮರ್ ಆಗಿದ್ಧಾರೆ. ಈ ಹಿಂದೆ ಈ ಸೀಟ್​​ನ್ನು ಆಕ್ಷನ್ ಮಾಡಿ, ಸೇಲ್ ಮಾಡಲಾಗಿತ್ತು. ವ್ಯಕ್ತಿಯೊಬ್ಬರು 28 ಮಿಲಿಯನ್ ಡಾಲರ್ ಅಂದ್ರೆ ಭಾರತ ರೂಪಾಯಿ ಲೆಕ್ಕದಲ್ಲಿ 207 ಕೋಟಿ ರೂಪಾಯಿಗಿಂತ ಜಾಸ್ತಿ ದುಡ್ಡಿಗೆ ಈ ಸೀಟ್ ಬುಕ್ ಮಾಡಿದ್ರು. ಆದ್ರೆ ತನ್ನ ವೇಳಾಪಟ್ಟಿಯಲ್ಲಿ ಏನೋ ತೊಂದ್ರೆಯಾಗಿದ್ರಿಂದ ನಾನು ಈ ಸಲ ಹೋಗಲ್ಲ. ನೆಕ್ಸ್ಟ್​ ಟೈಂ ಹೋಗ್ತೀನಿ ಅಂತ ಆ ವ್ಯಕ್ತಿ ತಿಳಿಸಿದ್ದರಿಂದ ಆಕ್ಷನ್​​ನಲ್ಲಿ ರನ್ನರ್ ಅಪ್ ಆಗಿದ್ದವರಿಗೆ ಈ ಅವಕಾಶ ಸಿಗ್ತು. ಡಾಯ್ಮನ್ ಒಲಿವರ್ ಅವರ ತಂದೆ hedge fund Somerset Capital Partners ಸಂಸ್ಥೆಯ ಸಿಇಒ ಜೋಸ್ ಡಾಯ್ಮನ್​​​​​​​​​ ರನ್ನರ್​ ಅಪ್ ಆಗಿದ್ರು. ಈಗ ಅವರು ತಮ್ಮ ಮಗ ಡಾಯ್ಮನ್ ಒಲಿವರ್​​​​​​ಗೆ ಅವಕಾಶ ನೀಡಿದ್ದಾರೆ. ಇವರ ಜೊತೆಗೆ 82 ವರ್ಷದ ಪೈಲೆಟ್​ ವ್ಯಾಲಿ ಫಂಕ್ ಕೂಡ ಪ್ರಯಾಣ ಬೆಳೆಸಲಿದ್ದಾರೆ. ಈ ಮೂಲಕ ಅತೀ ಕಡಿಮೆ ಮತ್ತು ಹೆಚ್ಚು ವಯಸ್ಸಿನವರು ಬಾಹ್ಯಾಕಾಶಕ್ಕೆ ಹಾರಿದ ದಾಖಲೆ ಕೂಡ ನಿರ್ಮಾಣವಾಗ್ತಿದೆ.

-masthmagaa.com

Contact Us for Advertisement

Leave a Reply