ಕೆಎಸ್​ಆರ್​ಟಿಸಿ, ಬಿಎಂಟಿಸಿ ಸಂಚಾರ ಆರಂಭ, ಏಪ್ರಿಲ್ ಪಾಸ್ ಬಳಕೆಗೆ ಅವಕಾಶ!

masthmagaa.com:

ಬಹಳ ದಿನಗಳ ಬಳಿಕ ಮೆಟ್ರೋ ರೈಲು, ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳು 50% ಕೆಪಾಸಿಟಿಯೊಂದಿಗೆ ಸಂಚಾರ ಆರಂಭ ಮಾಡಿವೆ. ಆದ್ರೆ ಬಸ್ ಗಳು ಮೊದಲಿಗಿಂತ ಸ್ವಲ್ಪ ಕಮ್ಮಿನೇ ಓಡ್ತಿವೆ. ಬೇಡಿಕೆ ನೋಡಿಕೊಂಡು ಹಂತಹಂತವಾಗಿ ಎಲ್ಲ ಬಸ್ ಗಳನ್ನೂ ರಸ್ತೆಗಿಳಿಸಲು ಸಾರಿಗೆ ಸಂಸ್ಥೆಗಳು ಯೋಜಿಸಿವೆ.)
ಈ ನಡುವೆ ಕೆಎಸ್‌ಆರ್‌ಟಿಸಿ 2021ರ ಏಪ್ರಿಲ್ ತಿಂಗಳ ಮಾಸಿಕ ಪಾಸ್ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಏಪ್ರಿಲ್ ತಿಂಗಳಲ್ಲಿ 15 ದಿನ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು ಹಾಗೂ ಕೊರೋನ ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ,ಪ್ರಯಾಣಿಕರು ಬಸ್ ಪಾಸ್ ಬಳಸಲು ಅವಕಾಶ ಇರಲಿಲ್ಲ. ಹೀಗಾಗಿ ಏಪ್ರಿಲ್ ತಿಂಗಳ ಬಸ್ ಪಾಸ್ ಅವಧಿಯನ್ನು ಜುಲೈ 8ರವರೆಗೆ ವಿಸ್ತರಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

-masthmagaa.com

Contact Us for Advertisement

Leave a Reply