ಅಮೆರಿಕದಲ್ಲಿ ಎಲ್ಲರ ಕಣ್ಣುಕುಕ್ಕಿದ್ದ ಹುಡುಗಿಯ ದುರಂತ ಅಂತ್ಯ

masthmagaa.com:

ಅಮೆರಿಕದಾದ್ಯಂತ ಬಾರೀ ಸಂಚಲನಕ್ಕೆ ಕಾರಣವಾಗಿದ್ದ 22 ವರ್ಷದ ಯುವತಿ ಗೇಬ್ರಿಯಾಲೇ ಪೆಟಿಟೋ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಮೆರಿಕದ ವ್ಯೋಮಿಂಗ್ ರಾಜ್ಯದ US NATIONAL FOREST ರೇಂಜ್ ನಲ್ಲಿ ಸಿಕ್ಕಿರೋ ಯುವತಿಯ ಶವ ನಾಪತ್ತೆಯಾಗಿರೋ ಪೆಟಿಟೋಗೆ ಹೋಲಿಕೆಯಾಗ್ತಿದೆ ಅಂತ FBI ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ಇದ್ದಕ್ಕಿದ್ದ ಹಾಗೆ ತನ್ನ ಜಾಬ್ ಗೆ ರಿಸೈನ್ ಮಾಡಿ, ಒಂದು ಕ್ಯಾಂಪ್ ವ್ಯಾನ್ ವವಸ್ಥೆ ಮಾಡಿಕೊಂಡು, ತನ್ನ ಬಾಯ್ಫ್ರೆಂಡ್ ಜೊತೆ ಇಡೀ ಅಮೆರಿಕ ಪರ್ಯಟನೆ ಮಾಡಲು ಹೊರಟಿದ್ದಳು ಈ ಯುವತಿ. ಮನೆಗೂ ಹೋಗ್ತಿರಲಿಲ್ಲ. ಈ ವ್ಯಾನ್ ನಲ್ಲೇ ಜೀವನ ಮಾಡ್ತಿದ್ಲು. 23 ವರ್ಷದ ಬಾಯ್ಫ್ರೆಂಡ್ ಬ್ರಿಯಾನ್ ಲಾಂಡ್ರೀ ಜೊತೆ ಪ್ರಯಾಣ ಮಾಡುತ್ತಾ, ಬಹಳ ಖುಷಿ ಖುಷಿಯಾಗಿ ವಿಡಿಯೋಸ್, ಫೋಟೋಸ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ಲು. ಆಹಾ ಜೋಡಿ ಅಂದ್ರೆ ಹೀಗಿರಬೇಕಪ್ಪ ಅನಿಸೋ ಮಟ್ಟಿಗೆ ಖುಷಿಯಾಗಿ ಕಾಣ್ತಿದ್ರು. ಆದ್ರೆ ಕೆಲ ದಿನಗಳ ಹಿಂದೆ ಇವರಿಬ್ಬರಿಗೂ ಈ ರೋಡ್ ಟ್ರಿಪ್ ವೇಳೆನೇ ಜಗಳ ಆಗಿತ್ತಂತೆ. ಆಗ ಮಧ್ಯಪ್ರವೇಶ ಮಾಡಿದ್ದ ಪೊಲಿಸರು ಒಂದು ಇಡೀ ದಿನವನ್ನ ದೂರ ದೂರ ಇದ್ದು ಕಳೆಯಿರಿ. ಕಾಮ್ ಡೌನ್ ಆದ್ಮೇಲೆ ಒಟ್ಟಿಗೆ ಪ್ರಯಾಣ ಮುಂದುವರಿಸಿ ಅಂದಿಂದ್ರಂತೆ. ಆಗ ನನಗೆ ಮಾನಸಿಕವಾಗಿ ತೊಂದ್ರೆ ಇದೆ ಅಂತ ಯುವತಿ ಹೇಳಿಕೊಂಡಿದ್ದಳಂತೆ. ಆದ್ರೆ ಅದಾದ ಮೇಲೆ ಕೆಲದಿನಗಳ ಬಳಿಕ ಲಾಂಡ್ರೀ ಒಬ್ಬನೇ ಮನೆಗೆ ಬಂದಾಗ ಗಾಬರಿಯಾದ ಪೆಟಿಟೋಳ ಪೋಷಕರು ನಾಪತ್ತೆ ಪ್ರಕರಣ ದಾಖಲು ಮಾಡಿದ್ರು. ಈಗ ಫೈನಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಬಾಯ್ಫ್ರೆಂಡ್ ಲಾಂಡ್ರೀಯನ್ನ ನೇರವಾಗಿ ಆರೋಪಿ ಮಾಡಿಲ್ಲ. ಬದಲಾಗಿ ‘ಪರ್ಸನ್ ಆಫ್ ಇಂಟರೆಸ್ಟ್’ ಅಂತ ಘೊಷಿಸಿ ಈಗ ತಬಿಖೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply