ಅಫ್ಘನಿಸ್ತಾನದಲ್ಲಿ ಅಮೆರಿಕ ಬಿಟ್ಟುಹೋದ ಆಯುಧ ಈಗ ಪಾಕಿಸ್ತಾನ್​ ಕೈಗೆ!

masthmagaa.com:

ತಾಲಿಬಾನ್ ಟೇಕೋವರ್ ಟೈಮಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ, ನ್ಯಾಟೋ ಮತ್ತು ಅಫ್ಘನ್​​ ಪಡೆಗಳು ಬಿಟ್ಟು ಹೋದ ಆಯುಧಗಳು ಈಗ ಪಾಕಿಸ್ತಾನದಲ್ಲಿ ಅಗ್ಗದ ದರದಲ್ಲಿ ಬಿಕರಿಯಾಗ್ತಿವೆ ಅಂತ ವರದಿಯಾಗಿದೆ. ಅಫ್ಘನ್‌ ಗಡಿಗೆ ಹತ್ತಿರ ಇರೋ ಪಾಕಿಸ್ತಾನದ ಲಂಡಿಕೋತಲ್‌ ನಗರದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಿಟ್ಟು ಹೋದ ಗನ್‌, ಪಿಸ್ತೂಲ್, ಗ್ರನೇಡ್‌, ಡ್ಯಾಗರ್​, ನೈಟ್​ ವಿಷನ್​ ಗಾಗಲ್ಸ್, ಬೈನಾಕ್ಯುಲರ್​, ಮಿಲಿಟರಿ ಸಮವಸ್ತ್ರ – ಎಲ್ಲಾ ಈಗ ಜನರಿಗೆ ಅನಾಯಾಸವಾಗಿ ದೊರೆಯುತ್ತಿವೆ. ಅಮೆರಿಕ ಮತ್ತು ನ್ಯಾಟೋ ಸೇನೆ ಅಫ್ಘಾನಿಸ್ತಾನವನ್ನ ಬಿಟ್ಟು ಹೋದ ತಕ್ಷಣ ಅವರು ಬಿಟ್ಟ ಆಯುಧಗಳು ತಾಲಿಬಾನಿಗಳು ಮತ್ತು ಸ್ಥಳೀಯರ ಪಾಲಾಗಿತ್ತು. ಆದ್ರೆ ಇತ್ತೀಚೆಗೆ ತಾಲಿಬಾನ್‌ ಸರ್ಕಾರ ಅಮೆರಿಕದ ಆಯುಧಗಳನ್ನ ಇಟ್ಕೊಂಡಿದ್ದು ಗೊತ್ತಾದ್ರೆ ಅವರಿಗೆ ಶಿಕ್ಷೆ ನೀಡಲಾಗುತ್ತೆ ಅಂತ ಎಚ್ಚರಿಸಿತ್ತು. ಸೋ ಪಕ್ಕದ ಪಾಕಿಸ್ತಾನಕ್ಕೆ ಈ ಆಯುಧಗಳು ಸ್ಮಗಲ್‌ ಆಗೋದು ಮತ್ತಷ್ಟು ಹೆಚ್ಚಾಗಿದೆ. ಅಫ್ಘನಿಸ್ತಾನದಿಂದ ಪಾಕಿಸ್ತಾನಕ್ಕೆ ಬರ್ಬೇಕು ಅಂದ್ರೆ ಮೂರು ಹಂತದ ಸೆಕ್ಯೂರಿಟಿ ಚೆಕಂಗ್ ಇದೆ. ಹೀಗಿದ್ರೂ ಹಣ್ಣು ಮತ್ತು ತರಕಾರಿ ಟ್ರಕ್​​ಗಳಲ್ಲಿ ಇವುಗಳನ್ನ ಇರಿಸಿ ಸಾಗಿಸಲಾಗ್ತಿದೆ. ಚೆಕ್​ ಪೋಸ್ಟ್​ಗಳಲ್ಲಿ ಇಡೀ ಟ್ರಕ್​ ಅನ್ನೇ ಸ್ಕ್ಯಾನ್​ ಮಾಡುವ ವ್ಯವಸ್ಥೆ ಇದ್ರೂ, ಅಫ್ಘನಿಸ್ತಾನದಿಂದ ಪಾಕಿಸ್ತಾನಕ್ಕೆ ಆಯುಧಗಳು ಬರ್ತಿವೆ ಅಂದ್ರೆ ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿರೋ ಅನುಮಾನ ಮೂಡಿದೆ. ಪಾಕಿಗಳ ಕೈಗೆ ಇಂಥಾ ಆಟಿಕೆಗಳ ಥರ ಆಯುಧಗಳು ಸಿಗೋದು ಒಳ್ಳೇ ವಿಚಾರವಲ್ಲ. ಇದರಿಂದ ಪಾಕ್​ ಜೊತೆ ಗಡಿ ಹಂಚಿಕೊಂಡಿರೋ ಭಾರತಕ್ಕೂ ಸಮಸ್ಯೆ ಆಗ್ಬೋದು.

-masthmagaa.com

Contact Us for Advertisement

Leave a Reply