ಪ್ರಿಕಾಷನರಿ ಡೋಸ್​​​​ಗೆ ವೈದ್ಯರ ಸರ್ಟಿಫಿಕೇಟ್ ಬೇಡ: ಕೇಂದ್ರ

masthmagaa.com:

ವಿವಿಧ ಕಾಯಿಲೆಗಳಿಂದ ಬಳಲುತ್ತಿರೋ 60 ವರ್ಷ ಮೇಲ್ಪಟ್ಟರು ಪ್ರಿಕಾಷನರಿ ಡೋಸ್​ ಅಥವಾ ಬೂಸ್ಟರ್ ಡೋಸ್​ ಲಸಿಕೆ ಪಡೆಯಲು ಡಾಕ್ಟರ್ ಸರ್ಟಿಫಿಕೆಟ್​ ಸಬ್​ಮಿಟ್​ ಮಾಡೋ ಅವಶ್ಯಕತೆ ಇಲ್ಲ ಅಂತ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ಕೊಟ್ಟಿದೆ. ಈ ಹಿಂದೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರೋರು ಅಂತ ಪ್ರೂವ್ ಮಾಡಲು ವೈದ್ಯರ ಸರ್ಟಿಫಿಕೆಟ್​ ಅನ್ನ ತೋರಿಸಬೇಕು ಅಂದುಕೊಳ್ಳಲಾಗಿತ್ತು. ಆದ್ರೀಗ ಅದರ ಅವಶ್ಯಕತೆ ಇಲ್ಲ. ಆದ್ರೆ ಪ್ರಿಕಾಷನ್​ ಡೋಸ್​ ಹಾಕಿಸಿಕೊಳ್ಳೋಕೂ ಮುಂಚೆ ವೈದ್ಯರ ಸಲಹೆ ಪಡೀಬೇಕು ಅಂತ ಹೇಳಿದೆ. ಸೋ ಬೇರೆ ಬೇರೆ ಆರೋಗ್ಯ ಸಮಸ್ಯೆ ಇರೋರು ಯಾರ್ಯಾರು, ಇಲ್ಲದೇ ಇರೋರು ಯಾರು ಅನ್ನೋದನ್ನ ಹೇಗೆ ನಿರ್ಧರಿಸ್ತಾರೆ ಅನ್ನೋದು ಅಸ್ಪಷ್ಟವಾಗಿದೆ. ಡಾಕ್ಟರ್​ ಸರ್ಟಿಫಿಕೆಟ್​ ಬೇಡ ಅಂತಾದ್ರೆ 60 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕೋಬೋದು ಅಂತಾಯ್ತು.

-masthmagaa.com

Contact Us for Advertisement

Leave a Reply