ಪಬ್ಲಿಕ್ ಪ್ಲೇಸ್​​​ನಲ್ಲಿ ಅದು ಮಾಡಿದ್ದಕ್ಕೆ 30 ಸಾವಿರ ದಂಡ..!

ಬ್ರಿಟನ್​​: ಪಬ್ಲಿಕ್ ಪ್ಲೇಸ್​​ನಲ್ಲಿ ಸೆಕ್ಸ್ ಮಾಡಿದ ಜೋಡಿಗೆ ಕೋರ್ಟ್​​ ಬರೋಬ್ಬರಿ 30 ಸಾವಿರ ರೂಪಾಯಿ ದಂಡ ವಿಧಿಸಿದೆ. ಬ್ರಿಟನ್​​ನ ವೆಸ್ಟ್​ ಸಸೆಕ್ಸ್​ನಲ್ಲಿ ಈ ಘಟನೆ ಇದಾಗಿದೆ. 51 ವರ್ಷದ ಡೇವಿಡ್ ಮಂಡೇವಿಲೇ ಮತ್ತು 38 ವರ್ಷದ ಲೂಸಿ ಎಲಿಸ್ ಪಾರ್ಕಿಂಗ್​​ನಲ್ಲಿ ನಿಲ್ಲಿಸಿದ ಕಾರ್​​​​​​​​​ ಮೇಲೆ ಸೆಕ್ಸ್ ಮಾಡಿದ್ದಾರೆ. ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊದಲಿಗೆ ಬಾರೊಂದರಲ್ಲಿ ಈ ಜೋಡಿ ಅಶ್ಲೀಲವಾಗಿ ವರ್ತಿಸಲು ಶುರು ಮಾಡಿದ್ರು. ನಂತರ ಅವರನ್ನು ರಾತ್ರಿ 10 ಗಂಟೆ ವೇಳೆಗೆ ಬಾರ್​​ನಿಂದ ಹೊರಗೆ ಹಾಕಲಾಯ್ತು. ನಂತರ ಪಾರ್ಕಿಂಗ್ ಜಾಗಕ್ಕೆ ಹೋದ ಈ ದಂಪತಿ ಸೆಕ್ಸ್ ಮಾಡಿದ್ದಾರೆ. ಇಬ್ಬರೂ ಭಾರಿ ಪ್ರಮಾಣದಲ್ಲಿ ಎಣ್ಣೆ ಹೊಡೆದಿದ್ದರು ಅಂತ ತಿಳಿದುಬಂದಿದೆ.

ನಂತರ ಕೋರ್ಟ್​​ನಲ್ಲೂ ಡೇವಿಡ್ ಮಂಡೇವಿಲೇ ಮತ್ತು ಲೂಸಿ ಎಲಿಸ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೋರ್ಟ್​ 30 ಸಾವಿರ ದಂಡ ವಿಧಿಸಿದೆ.

Contact Us for Advertisement

Leave a Reply