58ನೇ ವಯಸ್ಸಿಗೆ 8ನೇ ಬಾರಿ ತಂದೆಯಾದ ಬೋರಿಸ್ ಜಾನ್ಸನ್!

masthmagaa.com:

ಬ್ರಿಟನ್‌ನ ಮಾಜಿ ಪ್ರಧಾನಿ, ಬೋರಿಸ್‌ ಜಾನ್ಸನ್ ತಮ್ಮ 58ನೇ ವರ್ಷದಲ್ಲಿ 8ನೇ ಮಗುವಿಗೆ ತಂದೆಯಾಗ್ತಿರೋದಾಗಿ ಅನೌನ್ಸ್‌ ಮಾಡಿದ್ದಾರೆ. ಬೋರಿಸ್‌ ಅವ್ರ‌ ಪತ್ನಿ ಕೇರಿ ಜಾನ್ಸನ್‌ ತಮ್ಮ ಮೂರನೇ ಮಗು ಇನ್ನೇನು ಜಗತ್ತಿಗೆ ಬರಲಿದೆ ಅಂತ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಕೇರಿ, ಜಾನ್ಸನ್‌ರ ಮೂರನೇ ಪತ್ನಿಯಾಗಿದ್ದು, 2021ರ ಮೇನಲ್ಲಿ ಮದ್ವೆಯಾಗಿದ್ರು. ಈಗಾಗಲೇ ಈ ದಂಪತಿಗೆ 2 ಮಕ್ಕಳಿವೆ. ಮೊದಲ ಮಗು 2020ರ ಏಪ್ರಿಲ್‌ನಲ್ಲಿ ಅಂದ್ರೆ ಮದುವೆಗೆ ಮುನ್ನ ಹಾಗೂ ಎರಡನೇ ಮಗು ಡಿಸೆಂಬರ್‌ 2021ರಲ್ಲಿ ಅಂದ್ರೆ ಮದುವೆಯಾಗಿ ಸುಮಾರು 6 ತಿಂಗಳ ನಂತರ ಜನಿಸಿವೆ. ಇದೀಗ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಬೋರಿಸ್‌ ದಂಪತಿ ಇದ್ದಾರೆ. ಇನ್ನು ಬೋರಿಸ್‌ ತಮ್ಮ ಎರಡನೇ ಪತ್ನಿಯ ಜೊತೆ 4 ಮಕ್ಕಳನ್ನ ಹೊಂದಿದ್ದಾರೆ. ಹಾಗೂ ತಮ್ಮ ಗೆಳತಿಯಿಂದ ಒಂದು ಮಗುವನ್ನ ಹೊಂದಿದ್ದಾರೆ. ಇನ್ನು ಮೊದಲನೇ ಪತ್ನಿಯಿಂದ ಮಗುವನ್ನ ಹೊಂದಿಲ್ಲ.

-masthmagaa.com

Contact Us for Advertisement

Leave a Reply